ಬೆಳಗಾವಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಬುಧವಾರದ ನಂತರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮೋದನೆ ಸಾಧ್ಯತೆಯಿದ್ದು, ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ.ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ […]

ತಾವಾಡಿದ ಮಾತುಗಳು ರಾಷ್ಟ್ರಾದ್ಯಂತ ಪ್ರತಿಧ್ವನಿಸಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಧ್ಯಮಗಳ ಮೇಲೆ ಸಿಟ್ಟಾಗಿದ್ದಾರೆ. ಅವರ ಕೋಪ ಇನ್ನೂ ತಣ್ಣಿದಿಲ್ಲ.ಸುವರ್ಣಸೌಧಕ್ಕೆ ಬಂದ ಅವರನ್ನು ಎಂಇಎಸ್‌ ಪುಂಡಾಟಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು, ಮಾಧ್ಯಮಗಳ ಮುಂದೆ ಬಂದು ಅವರು ಕೈ ಮುಗಿದು ಒಳ ಹೋದರು.ಈ ಸಂದರ್ಭದಲ್ಲಿ ಅವರು ‘ ಜೀವಂತ ಇರುವವರನ್ನು ಮಾತನಾಡಿಸಿ, ನಾನು ಜೀವಂತ ಇಲ್ಲ. ನಾಲ್ಕುದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ’ […]

ಕುಳ್ಳ ದೇವರಾಜ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ…ಕೃಷ್ಣಮೂರ್ತಿ ಎಂಬುವವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ  ಆರೋಪದ ಮೇಲೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ…ಸೈಟ್ ಗಲಾಟೆ ವಿಚಾರಕ್ಕೆ ಕೃಷ್ಣ ಮೂರ್ತಿಗೆ  ಕುಳ್ಳ ದೇವರಾಜ್ ಧಮ್ಕಿ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ ಈ ಹಿಂದೆಯಷ್ಟೇ ಶಾಸಕ ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿದ್ದ ಬಂಧಿತನಾಗಿದ್ದ ದೇವರಾಜ್‌ ಐಪಿಸಿ ಸೆಕ್ಷನ್‌ 506,34,504 ಹಾಗೂ ಎಸ್‌ಸಿ, ಎಸ್ ಟಿ ಕಾಯ್ದೆಯಡಿ […]

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಿಲುಮೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ವೀರ್ ಸಾವರ್ಕರ್ ದಿ ಮ್ಯಾನ್ ಹು ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು,ಶಾಸಕ ಎನ್.ಮಹೇಶ್ ಹಾಗೂ ನಿಲುಮೆ ಪ್ರತಿಷ್ಠಾನದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರುದ್ಧ ಭೂಕಬಳಿಕೆ ವಿಚಾರವಾಗಿ ಇಂದು ಕೆಆರ್ ಪುರ ಬಿಬಿಎಂಪಿ ಕಚೇರಿಯ ಎದುರು ಕೆಆರ್ ಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು…ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆಗೆ ಒತ್ತಾಯಿಸಿದರು.. ಬಳಿಕ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು, ಭೂಕಬಳಿಕೆ ಮಾಡಿದ ಬೈರತಿ ಬಸವರಾಜ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು… ಇತ್ತ ಭೂ ಮಾಲೀಕ ಅಣ್ಣಯ್ಯಪ್ಪ ಅವರ […]

ಭಗವಂತ ಕೃಷ್ಣನ ಜನ್ಮಸ್ಥಳವಾದ ಮಥುರಾ ಕ್ಷೇತ್ರವನ್ನು ನಾನು ಸಂಸತ್‌ ನಲ್ಲಿ ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಅಲ್ಲಿ ಭವ್ಯವಾದ ಮಂದಿರವೊಂದು ಇರಬೇಕೆಂದು ನಾನು ಆಶಿಸುತ್ತೇನೆ. ಮಥುರಾದಲ್ಲಿ ಈಗಾಗಲೇ ದೇವಾಲಯವಿದೆ. ಅದನ್ನು ಕಾಶಿ ವಿಶ್ವನಾಥ ಕಾರಿಡಾರ್ ರೀತಿ ಅಭಿವೃದ್ಧಿಪಡಿಸಬೇಕು,’ ಎಂದು ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.ರಾಮ ಜನ್ಮಭೂಮಿ ಮತ್ತು ಕಾಶಿಯ ಮರುಸ್ಥಾಪನೆಯ ನಂತರ, ಸ್ವಾಭಾವಿಕವಾಗಿ ಮಥುರಾವನ್ನು ಅಭಿವೃದ್ಧಿಗೊಳಿಸುವುದು ಮುಖ್ಯವಾಗುತ್ತದೆ, ಎಂದು ಸಂಸದೆ ಭಾನುವಾರ ಇಂದೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದೋರ್‌ಗೆ ಆಗಮಿಸಿದ್ದ ಸಂಸದೆ […]

ಮಹಿಳೆಯರ ಮದುವೆಯ  ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರವು ಹಲವಾರು ವಲಯಗಳಿಂದ ತೀವ್ರ ಟೀಕೆಗೆ ಒಳಗಾಗಿದೆ ಮತ್ತು ಸಿಪಿಐ-ಎಂ ವಿವಿಧ ಅಂಶಗಳಲ್ಲಿ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.ಸಿಪಿಐ-ಎಂ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಮಾತನಾಡಿ, ಸರ್ಕಾರದ ಪ್ರಸ್ತಾವನೆಯು ಮಹಿಳಾ ಸಬಲೀಕರಣದ ಹೋರಾಟಕ್ಕೆ ಸಹಾಯ ಮಾಡುವುದಿಲ್ಲ. ‘ವಯಸ್ಕರ ವೈಯಕ್ತಿಕ ಆಯ್ಕೆಯನ್ನು ಅಪರಾಧೀಕರಿಸುವುದು ಸಂಪೂರ್ಣವಾಗಿ ತಪ್ಪು. ಸರ್ಕಾರವು ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಬಯಸಿದರೆ, ಅದು ಗಂಡುಮಕ್ಕಳ […]

ಶಿವಮೊಗ್ಗ: ಮಹಾರಾಷ್ಟ್ರ ಸಿಎಂ ಆಕಾಶದಿಂದ ಇಳಿದು ಬಂದಿಲ್ಲ ಅಂಥ ಸಚಿವ ಈಶ್ವರಪ್ಪನವುರ ಟಾಂಗ್‌ ಮಾಡಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ, ಈ ಬಗ್ಗೆ ಹೇಳಿದ್ರು. ಇದೇ ವೇಳೆ ಅವರು ಮಾತನಾಡುತ್ತ, ನಾಡು, ನುಡಿಗೆ, ಗಡಿಗೆ ಸಂಬಂಧಪಟ್ಟಂತೆ ಮಾಡುತ್ತಿರುವ ಕಿಡಿಗೇಡಿಗಳ ಕೃತ್ಯಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.ಇನ್ನೂ ಮಹಾ ಸಿಎಂ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ ಅಂತ ಅವರು ಹೇಳಿದರು. ಇನ್ನೂ […]

ದೇಶಭಕ್ತರಾದ ಶಿವಾಜಿ ಮಹರಾಜರು, ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮ ಅವರು ಸಮುದಾಯ ಮೀರಿ ನಿಂತು ದೇಶಕ್ಕಾಗಿ ತ್ಯಾಗ ಮಾಡಿ ದೇಶವನ್ನು ಒಗ್ಗೂಡಿಸಿದವರು, ಅವರ ಹೆಸರಲ್ಲಿ ನಾವೆಲ್ಲರು ಒಗ್ಗಟ್ಟಾಗಿ ಇರಬೇಕು, ಅವರನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಶಿಗ್ಗಾವಿ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ, ಈಗ ನಡೆಯುತ್ತಿರುವ ಗೊಂದಲದ ಬಗ್ಗೆ […]

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ ನೇತೃತ್ವದ ಸರಕಾರದ ಮೇಲೆ ಸಂಘದ ನಿಯಂತ್ರಣವಿಲ್ಲ. ಅವರು ವಿಭಿನ್ನ ಕಾರ್ಯನಿರ್ವಾಹಕರು, ವಿಭಿನ್ನ ನೀತಿಗಳು, ವಿಭಿನ್ನ ಕಾರ್ಯ ವಿಧಾನಗಳನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್  ಹೇಳಿದ್ದಾರೆ.ಆಲೋಚನೆಗಳು ಹಾಗೂ ಸಂಸ್ಕೃತಿ ಸಂಘದ್ದು ಹಾಗೂ ಅದು ಪರಿಣಾಮಕಾರಿಯಾಗಿದೆ. ಅಲ್ಲಿ  ಕೆಲಸ ಮಾಡುತ್ತಿರುವ ಪ್ರಮುಖರು ಸಂಘಕ್ಕೆ ಸೇರಿದವರು ಹಾಗೂ ಹಾಗೆಯೇ ಉಳಿಯುತ್ತಾರೆ. ಅಂತಹ ಸಂಬಂಧ ಮಾತ್ರ ಇದೆ. ಮಾಧ್ಯಮಗಳು ಹೇಳುವಂತೆ ‘ಡೈರೆಕ್ಟ್ […]

Advertisement

Wordpress Social Share Plugin powered by Ultimatelysocial