ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದ ಕಾನ್​ಸ್ಟೇಬಲ್.

ಬೆಂಗಳೂರು: ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದು ನಂತರ ವಾಪಸ್​ ಕೊಟ್ಟ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಎಚ್​ಎಎಲ್​ ಸಂಚಾರ ಠಾಣೆ ಕಾನ್​ಸ್ಟೇಬಲ್​ ಪವನ್​ ದ್ಯಾಮಣ್ಣನವರ್​ ಅಮಾನತಿಗೆ ಒಳಗಾದವರು.ಕಳಪೆ ಹೆಲ್ಮೆಟ್​ ಧರಿಸಿದ್ದ ಬೈಕ್​ ಸವಾರನಿಂದ 100 ರೂ. ದಂಡ ಪಡೆದಿದ್ದರು. ಬೈಕ್​ ಸವಾರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಂಡವನ್ನು ಪೇದೆ ವಾಪಸ್​ ಕೊಟ್ಟಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿತ್ತು.ಸ್ಥಳದಲ್ಲಿ ದಂಡ ವಿಧಿಸುವ ಅಧಿಕಾರ ಎಎಸ್​ಐ ಮತ್ತು ಮೇಲ್ದರ್ಜೆ ಅಧಿಕಾರಿಗಳಿಗೆ ಮಾತ್ರ ನೀಡಲಾಗಿದೆ. ಕಾನ್​ಸ್ಟೇಬಲ್​ ಮತ್ತು ಹೆಡ್​ ಕಾನ್​ಸ್ಟೇಬಲ್​ಗಳಿಗೆ ಈ ಅಧಿಕಾರ ಇಲ್ಲ. 15 ದಿನಗಳಿಂದ ಐಎಸ್​ಐ ಗುಣಮಟ್ಟದ ಹೆಲ್ಮೆಟ್​ ಧರಿಸುವಂತೆ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಆದರೆ, ಇಲ್ಲಿಯವರೆಗೂ ಸವಾರರಿಗೆ ದಂಡ ವಿಧಿಸುವಂತೆ ಯಾವುದೇ ಆದೇಶ ನೀಡಿಲ್ಲ. ಆಂತರಿಕ ವರದಿ ಪಡೆಯಲಾಗಿದೆ. ಕಾನ್​ಸ್ಟೇಬಲ್​ ತಪ್ಪು ಮಾಡಿರುವುದು ಕಂಡುಬಂದಿದೆ ಎಂದು ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಡಾ.ಬಿ.ಆರ್​. ರವಿಕಾಂತೇಗೌಡ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್!

Sat Feb 5 , 2022
ಬಾಗಲಕೋಟೆ: ಕನ್ನಡದ ಕಬೀರ, ಆಧುನಿಕ ಸೂಫಿ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ನಿವಾಸದಲ್ಲಿ ಇಬ್ರಾಹಿಂ ಸುತಾರ್ ಇಂದು ಮುಂಜಾನೆ 6:30ರ ಸುಮಾರಿಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಹಿಂದೂ ಮುಸ್ಲೀಂ ಭಾವೈಕ್ಯತೆಯ ಪಾಠ ಸಾರಿದ್ದ ಇಬ್ರಾಹಿಂ ಸುತಾರ್, ಪ್ರವಚನಕ್ಕೆ ಹೆಸರಾಗಿದ್ದರಲ್ಲದೇ ಬಸವಣ್ಣನವರ ಅನುಯಾಯಿಯಾಗಿದ್ದರು.1940 ಮೇ 10 ರಂದು ಜನಿಸಿದ್ದ ಇಬ್ರಾಹಿಂ ಸುತಾರ್, ಆರ್ಥಿಕ ಸಂಕಷ್ಟದಿಂದಾಗಿ […]

Advertisement

Wordpress Social Share Plugin powered by Ultimatelysocial