HP ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ ‘ಬಂಪರ್’

HP ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 'ಬಂಪರ್'

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಹೂಡಿಕೆದಾರರಿಗೆ 45 ರೂಪಾಯಿಗಳ ಲಾಭ ಸಿಕ್ಕಿದೆ. ಇದರ ಷೇರುಗಳು ಬಿಎಸ್‌ಇಯಲ್ಲಿ 319 ರೂಪಾಯಿಗೆ ಲಿಸ್ಟ್ ಆಗಿದೆ.

ಇದರ ಒಂದು ಷೇರನ್ನು 274 ರೂಪಾಯಿಗೆ ಖರೀದಿ ಮಾಡಲಾಗಿತ್ತು. ಅಂದ್ರೆ ಈ ಷೇರು ಖರೀದಿ ಮಾಡಿದ ಹೂಡಿಕೆದಾರರಿಗೆ ಶೇಕಡಾ 16.42ರಷ್ಟು ಲಾಭ ಸಿಕ್ಕಿದೆ. ಇದ್ರ ಐಪಿಒ ಬಿಡ್ಡಿಂಗ್ ಡಿಸೆಂಬರ್ 15 ಮತ್ತು 17 ರ ನಡುವೆ ನಡೆದಿತ್ತು.

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿಲ್ಲರೆ ಹೂಡಿಕೆದಾರರಲ್ಲಿ ಇದ್ರ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಕಂಪನಿ ಶೇಕಡಾ 10ರಷ್ಟನ್ನು ಚಿಲ್ಲರೆ ಹೂಡಿಕೆದಾರರಿಗೆ ಮೀಸಲಿಟ್ಟಿತ್ತು. ಎಚ್ ಪಿ ಅಡ್ಹೆಸಿವ್ಸ್‌ ಐಪಿಎಒನಲ್ಲಿ, 25,28,500 ಷೇರುಗಳನ್ನು ನೀಡಲಾಗಿತ್ತು.

ಎಚ್ಪಿ ಅಡ್ಹೆಸಿವ್ಸ್ ಲಿಮಿಟೆಡ್‌ನ ಐಪಿಒ ಡಿಸೆಂಬರ್ 15 ರಂದು ಶುರುವಾಗಿತ್ತು. ಡಿಸೆಂಬರ್ 17 ರವರೆಗೆ ತೆರೆದಿತ್ತು. ಪ್ರತಿ ಷೇರನ್ನು 262 ರೂಪಾಯಿಯಿಂದ 274 ರೂಪಾಯಿಗೆ ಮಾರಾಟ ಮಾಡಲಾಗಿತ್ತು.

ಐಪಿಒದಿಂದ ಸಂಗ್ರಹವಾದ ಹಣವನ್ನು ಕಂಪನಿ ಅದರ ಕಾರ್ಯನಿರತ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಬಳಸಲಿದೆ. ಉತ್ಪಾದನಾ ಘಟಕದ ವಿಸ್ತರಣೆಗೂ ಒಂದಷ್ಟು ಮೊತ್ತವನ್ನು ವ್ಯಯಿಸಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರಪಂಚದಾದ್ಯಂತ ಕನ್ನಡ ಜೋಡಿ ಮಾಡುತ್ತಿದೆ ಮೋಡಿ | Flying Couples

Mon Dec 27 , 2021
ಪ್ರವಾಸದಲ್ಲಿ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಗೆಳತಿ,ವ್ಯಾಧಿಗ್ರಸ್ತನಿಗೆ  ಔಷದಿಯೇ ಮಿತ್ರನು,ಸತ್ತವನಿಗೆ ಅವನ ಧರ್ಮವೇ ಮಿತ್ರನು ಎನ್ನುವ ಆಗೇ ಇಲ್ಲೊಂದು ಅಪರೂಪದ ಜೋಡಿಯೊಂದು ದೇಶ-ವಿದೇಶವನ್ನ ಸುತ್ತುತ್ತಾ ಅಲ್ಲಿನ ಆಚಾರ-ವಿಚಾರಗಳು, ವೇಶ-ಭೂಷಣಗಳು ಮತ್ತು ಸಂಸ್ಕೃತಿಯನ್ನ ನೋಡಿತ್ತಾ ಫುಲ್‌ ಎಂಜಾಯ್‌ ಮಾಡ್ತಿದಾರೆ.ನಾವು ಇಗಾಗಲೇ ಅದೇಷ್ಟೊ ಜೋಡಿಗಳು ದೇಶ-ವಿದೇಶಗಳನ್ನು ಸುತ್ತಿರೊದ್ದನ್ನ ನೋಡಿದ್ದೀವಿ.ಆದರೆ ಅದೇನ್ನಪ್ಪ ಈ ಜೋಡಿಯಾ ಸ್ಪೆಶಾಲಿಟಿ ಅಂತೀರಾ , ಹೌದು ಕಣ್ರಿ ಈ ಸ್ಪೆಶಲ್‌ ಜೋಡಿ ದೇಶ-ವಿದೇಶಗಳನ್ನು ಸುತ್ತೋದರ ಮೂಲಕ ಕನ್ನಡದಲ್ಲಿ ವ್ಲಾಗ್‌ ಮಾಡುತ್ತಾ ಕರ್ನಾಟಕದ […]

Advertisement

Wordpress Social Share Plugin powered by Ultimatelysocial