POLITICS:ಕೈ ಮೇಲು, ಮುದುಡಿದ ಕಮಲ, ಜೆಡಿಎಸ್ ಪಾತಾಳ;

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಆಡಳಿತ ಪಕ್ಷ ಬಿಜೆಪಿಗೆ ಹಿನ್ನಡೆ ಉಂಟಾದರೆ, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜೆಡಿಎಸ್ ಪಾತಳಕ್ಕೆ ಕುಸಿದಿದೆ.

ಗುರುವಾರ ನಡೆದ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿಸಿಕೊಂಡರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಶಿಧರ ಜೊಲ್ಲೆ ಮತ್ತು ಶ್ರೀರಾಮುಲು ಮುಂತಾದ ಬಿಜೆಪಿ ನಾಯಕರಿಗೆ ತವರಿನಲ್ಲಿ ಸೋಲುಂಟಾಗಿದೆ.

ಪಟ್ಟಣ ಪಂಚಾಯಿತಿಯ 577 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 194 ಹಾಗೂ ಜೆಡಿಎಸ್ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರರು ಈ ಬಾರಿ ಪ್ರಾಬಲ್ಯ ಮೆರೆದಿದ್ದು 135 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.

ಪುರಸಭೆಯ 441 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 201 ಸ್ಥಾನಗಳಲ್ಲಿ ಗೆಲುವು ಕಂಡರೆ, 176 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಜೆಡಿಎಸ್ 21 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಪಕ್ಷೇತರ ಅಭ್ಯರ್ಥಿಗಳು 43 ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ.

ನಗರಸಭೆಯ 166 ಸ‍್ಥಾನಗಳಲ್ಲಿ 67 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಕಂಡರೆ, 61 ಸ್ಥಾನಗಳಲ್ಲಿ ಕಾಂಗ್ರೆಸ್, 12 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರೇಪ್‌ ಕೇಸ್‌ ರಾಘವಶ್ರೀಗೆ ಹೈಕೋರ್ಟ ನಲ್ಲೂ ಜಯ.....

Thu Dec 30 , 2021
  ರಾಮಚಂದ್ರಾಪುರ ಮಠದ ರಾಘವೇಶ್ರೀ ಸ್ವಾಮೀಜಿ ವಿರುದ್ದ ದ ಅತ್ಯಾಚಾರ ಪ್ರಕರಣದಲ್ಲಿನ ಅದೀನ ನ್ಯಾಯಾಲಯ ನಿಡೀದ್ದ ತೀರ್ಪನ್ನು ಹೈಕೋರ್ಟ ಎತ್ತಿ ಹಿಡಿಯುವ ಮೂಲಕ ಸಂತ್ರಸ್ತೆ ಗಾಯಕಿಯ ಮತ್ತು ರಾಜ್ಯ ಸರ್ಕಾರ (ಸಿಐಡಿ ತನಿಕಾಧಿಕಾರಿಗಳು )ಸಲ್ಲಿಸಿದ್ದ ಕ್ರೀಮಿನಲ್‌ ಮರುಪರಿಶಿಲನಾ ಅರ್ಜಿಯ ತಿರ್ಪನ್ನು ಪ್ರಕಟಿಸಿದೆ.ತಿರ್ಪಿನಲ್ಲಿ ಅದೀನ ನ್ಯಾಯಾಲಯದ ಆದೇಶ ಸೂಕ್ತ ವಾಗಿದೆ ಇದರಲ್ಲಿ ಮದ್ಯಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow […]

Advertisement

Wordpress Social Share Plugin powered by Ultimatelysocial