ಉಡುಗಣವೇಷ್ಟಿತ ಚಂದ್ರಸುಶೋಭಿತ

ಉಡುಗಣವೇಷ್ಟಿತ ಚಂದ್ರಸುಶೋಭಿತ
ದಿವ್ಯಾಂಬರ ಸಂಚಾರಿ
ಕಣ್ಣನೀರಿನಲ್ಲಿ ಮಣ್ಣ ಧೂಳಿನಲಿ
ಹೊರಳುತ್ತಿರುವರ ಸಹಚಾರಿ.
ಕೋಟಿಸೂರ್ಯಕರ ತೇಜಃಪುಂಜತರ
ವಿದ್ಯುದ್ರಾಜಿತ ರಥಗಾಮಿ
ಉಳುತಿಹ ರೈತನ ನೇಗಿಲಸಾಲಿನ
ಮಣ್ಣಿನ ರೇಖಾ ಪಥಗಾಮಿ.
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ
ದೀನ ಅನಾಥರ ದುಃಖ ದರಿದ್ರರ
ಮುರುಕು ಗುಡಿಸಲಲಿ ಉಪವಾಸಿ
ಸಾಹಿತ್ಯ: ರಾಷ್ಟ್ರಕವಿ ಜಿ ಎಸ್. ಶಿವರುದ್ರಪ್ಪ
ಈ ಕವನದ ಕುರಿತು ಹೀಗೊಂದು ಚಿಂತನ:
ಬಹಳಷ್ಟು ದೇವರುಗಳು ವೈಭೋಗಗಳಿಂದ ಕಂಗೊಳಿಸಿದರೆ ಈಶ್ವರ ನಿರಾಡಂಬರಿ ಎಂಬುದು ನಮ್ಮ ಪುರಾಣಗಳಲ್ಲಿ ಹಾಗೂ ಜಾನಪದದಲ್ಲಿ ಪ್ರಚಲಿತದಲ್ಲಿದೆ.
ರಾಷ್ಟ್ರಕವಿಗಳಾದ ಡಾ. ಜಿ. ಎಸ್. ಶಿವರುದ್ರಪ್ಪನವರನ್ನು ಈ ಭಾವ ಆಕರ್ಷಿಸಿದೆ. ಇಲ್ಲಿ ಶಿವ ವಿಶ್ವನಿವಾಸಿ.
ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ
“ಅಂದರೆ ನಕ್ಷತ್ರಗಳ ಗುಂಪಿನಿಂದ ಆವೃತನಾದ ಚಂದ್ರನಿಂದ ಶೋಭಿತನಾದ ನೀಲಗಗನದ ಸಂಚಾರಿ.
ಅವನ ಸಂಚಾರ ಏತಕ್ಕಾಗಿ ಅದು ಕಣ್ಣ ನೀರು ಹಾಕುವ ಶೋಕಸ್ತರು ಮತ್ತು ಮಣ್ಣ ಧೂಳಿನಲಿ ಹೊರಳುವವರು ಅಂದರೆ ಮಣ್ಣಿನೊಂದಿಗೆ ಕಾಯಕ ಮಾಡುವ ಶ್ರಮಜೀವಿಗಳ ಸಹಚಾರಿಯಾಗಿ ಇರುವುದಕ್ಕಾಗಿ.
ಕೋಟಿಸೂರ್ಯಕರ ತೇಜಸ್ಸು ಉಳ್ಳ ಸಮಸ್ತ ವಿಶ್ವವನ್ನೂ ಆತ ನಡೆಸುತ್ತಾನೆ, ಉಳುತ್ತಿರುವ ರೈತನ, ನೇಗಿಲ ಸಾಲಿನ ಮಣ್ಣಿನ ರೇಖಾ ಪಥವನ್ನು ಕೂಡಾ ನಿರ್ಣಯಿಸುತ್ತಾನೆ.
ಆಕಾಶವನ್ನು ಚುಂಬಿಸುವ ಹಿಮಾವೃತ ಎತ್ತರದ ಪ್ರದೇಶದಲ್ಲಿ ನಿವಾಸಿಯಾದರೂ ಮುರುಕು ಗುಡಿಸಿಲಿನಲ್ಲಿರುವವರ ಬಡ ಹೃದಯಗಳಲ್ಲೂ ಆತ ನಿವಾಸಿ.
ಒಟ್ಟಿನಲ್ಲಿ ನೋಡುವುದಾದರೆ ಶಿವ ಇಡೀ ವಿಶ್ವ ವ್ಯಾಪಿಯಾದ ತೇಜೋವಂತನಾದರೂ ಆತ ಪ್ರತಿಯೊಂದು ಬಡಜೀವಿಯ ಕುರಿತು ಚಿಂತಿಸಿ ಅವರೊಡನೆ ವಾಸಿಸುವ, ಅವರೊಡನೆ ಬದುಕುವವ, ಅವರ ಹೃದಯಗಳನ್ನು ಪ್ರಕಾಶಿಸುವವ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೈವಾರ ರಾಜಾರಾವ್

Wed Mar 2 , 2022
ಕೈವಾರ ರಾಜಾರಾವ್ ನಾಟಕಕಾರರಾಗಿ ದೊಡ್ಡ ಹೆಸರು. ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರಲ್ಲಿ ಒಬ್ಬರು. ಗಂಟೆಗಟ್ಟಳೆ ಕುಳಿತು ನೋಡಬೇಕಾದ ಸ್ಥಳದಲ್ಲಿ ಒಂದು-ಒಂದುವರೆ ಗಂಟೆಯ ಸಾಮಾಜಿಕ ನಾಟಕಗಳು ಆಕ್ರಮಿಸತೊಡಗಿದಾಗ 1940-50ರ ದಶಕದಲ್ಲಿ ಕೈಲಾಸಂ, ಕೆ. ಗುಂಡಣ್ಣ, ಕೈವಾರ ರಾಜಾರಾಯರು ಮುಂತಾದವರುಗಳು ಸಾಮಾಜಿಕ ನಾಟಕಗಳ ರಚನೆಗೆ ಕೈಹಾಕಿದರು. ರಾಜಾರಾಯರು ಹುಟ್ಟಿದ್ದು 1912ರ ಫೆಬ್ರವರಿ 29ರಂದು ಜನಿಸಿದರು. ತಂದೆ ಕೈವಾರ ರಾಮಚಂದ್ರರಾವ್‌. ತಾಯಿ ಸುಂದರಾಬಾಯಿ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಶೀಘ್ರಲಿಪಿಯಲ್ಲಿ ಕರ್ನಾಟಕಕ್ಕೆ […]

Advertisement

Wordpress Social Share Plugin powered by Ultimatelysocial