ಹಿಂದುಳಿದ ವರ್ಗಗಳು ಮತ್ತು ಜಾತಿಗಳ ಕುರಿತು ಸಂಶೋಧನೆಗಾಗಿ ಸ್ಥಾಪಿಸಿರುವ ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾವ ಸರ್ಕಾರ ಮುಂದೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆಗೆ ಉತ್ತರಿಸಿದ ಅವರು, ಅರಸು ಸಂಶೋಧನಾ ಸಂಸ್ಥೆಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.ಹಿಂದುಳಿದ ವರ್ಗಗಳ […]

ನೆಲಮಂಗಲ: ಮಠ ಮಾನ್ಯಗಳು ವಿದ್ಯಾರ್ಥಿಗಳ ಪಾಲಿಕೆ ಜೀವನವನ್ನು ಕಲಿಸುವ ಗುರುಕುಲ ಇದ್ದಂತೆ, ಆದರೆ ಇಲ್ಲೊಂದು ಮಠ ಮಕ್ಕಳಿಗೆ ವಿದ್ಯೆ, ವಸತಿ, ಪ್ರಸಾದ ನೀಡುವ ಬದಲಿಗೆ ಕಾವಲು ಕಾಯುವ ಕೆಲಸದ ಶಿಕ್ಷೆ ನೀಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ತಮ್ಮ ಮಠದ ಶಾಲೆಯಲ್ಲಿ ಶಿಕ್ಷಣ ಕಲಿಯಬೇಕಾಗಿದ್ದ ಮಕ್ಕಳಿಗೆ ಪ್ರತಿನಿತ್ಯ ಕಾವಲು ಕಾಯೋ ಕೆಲಸಕ್ಕೆ ನೇಮಕ ಮಾಡಿರುವ ಆರೋಪ ಕೇಳಿಬಂದಿದೆ. […]

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಪರಿಷತ್ ಅಭ್ಯರ್ಥಿ ಸಲೀಂ ಅಹ್ಮದ್ ಹೇಳಿದ್ದಾರೆ.ಈ ಫಲಿತಾಂಶ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯಗಳಿಗೆ ನೀಡಿದ ಉತ್ತರ. ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಗ್ರಾಮೀಣ ಭಾಗದ ಏಳಿಗೆಯನ್ನು, ಬಿಜೆಪಿಯ ಭ್ರಷ್ಟಾಚಾರ ಹಾಗೂ ದುರಾಡಳಿತ ಕಸಿದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳು ಆಶ್ವಾಸನೆ ಹಾಗೂ ಅಹಂಕಾರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಸಲೀಂ ಅಹ್ಮದ್ […]

ಕೊರಟಗೆರೆ :- ತಾಲ್ಲೂಕು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ಹಿಂದೆ ಇದ್ದ ಅಧ್ಯಕ್ಷರು ವೈಯಕ್ತಿಕ ಕಾರಣದಿಂದ ರಾಜೀನಾಮೆ ಕೊಟ್ಟಿದ್ದರು. ತದನಂತರ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಅಲಿ ಉಪಾಧ್ಯಕ್ಷರಾಗಿದ್ದ ಭಾರತಿ ಸಿದ್ಮಲ್ಲಪ್ಪ ರವರು ಅವಿರೋಧವಾಗಿ ಆಯ್ಕೆಯಾಗಿದ್ದು ಇಂದು ಸರ್ವ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ ಮಾತನಾಡಿದ ಅವರು. ನಾನು ಇಂದಿನಿಂದ ತಾಲ್ಲೂಕು ಪಟ್ಟಣ ಪಂಚಾಯಿತಿಯ ಪ್ರಭಾರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ ನನ್ನ ಅಧ್ಯಕ್ಷಸ್ಥಾನ ಇರುವವರೆಗೂ ತಾಲ್ಲೂಕಿನ ಜನತೆಯ ಕುಂದುಕೊರತೆಗಳ […]

ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಪ್ರತಿಪಕ್ಷಗಳು ಕೆಲವೇ ಜಾತಿಗಳಿಗಾಗಿ ಕೆಲಸ ಮಾಡಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.ನಿಷಾದ್ ಪಕ್ಷ’ದ ಜತೆಗೂಡಿ ಬಿಜೆಪಿ ಆಯೋಜಿಸಿದ್ದ ‘ಸರ್ಕಾರ್ ಬನಾವೊ, ಅಧಿಕಾರ್ ಪಾವೊ’ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದ್ದಾರೆ.ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸಿದ್ದಾಗಲೆಲ್ಲಾ ಅವರ ಜಾತಿಗಾಗಿ ಮಾತ್ರ ಕೆಲಸ ಮಾಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಎಲ್ಲ ಹಿಂದುಳಿದ […]

ಕನ್ನಡ ಧ್ವಜಕ್ಕೆ ಅವಮಾನ ಮಾಡಿದ ಮಹಾರಾಷ್ಟ್ರದ ಪುಂಡರ ವಿರುದ್ಧ ನಟ ಧ್ರುವ ಸರ್ಜಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ.ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ.ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು. ಇದು ನನ್ನಂತಹ ಕೋಟ್ಯಾಂತರ ಕನ್ನಡಿಗರ ಒತ್ತಾಯ […]

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ’ ಚಿತ್ರ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಅದ್ದೂರಿಯಾಗಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅದಕ್ಕೆ ಬಲವಾದ ಕಾರಣ ಕೂಡ ಇದೆ. ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯ ಹೇರಲಾಗುತ್ತಿದೆ. ಹಾಗಾಗಿ ಟ್ವಿಟರ್​ನಲ್ಲಿ #BoycottPushpaInKarnataka ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ. ಇದು ಚಿತ್ರತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ.ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡಿದ್ದು, ಕನ್ನಡದ ಖ್ಯಾತ ನಟ ಡಾಲಿ ಧನಂಜಯ […]

ಕೆ ಆರ್ ಪೇಟೆ ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಮತ್ತು ಪದಾಧಿಕಾರಿಗಳು ನೇತೃತ್ವದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೆ ಖಾಸಿಂಖಾನ್ ಸಮುದಾಯ ಭವನ ಪಕ್ಕ ಆವರಣದಲ್ಲಿ ಆಯೋಜಿಸಿ ಕಾರ್ಯಕ್ರಮವನ್ನು ತಾಲೂಕಿನ ಹೆಸರಾಂತ ಸೈ ಡ್ಯಾನ್ಸ್ ಸ್ಕೂಲ್ ಮಕ್ಕಳು,ಸನ್ನಿ ಡ್ಯಾನ್ಸ್ ಸ್ಕೂಲ್ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮದ ಮುಖಾಂತರ ಚಾಲನೆ ನೀಡಿ,ಕೊರೋನಾ ವಾರಿಯರ್ಸ್ ಹಾಗೂ ಗಣ್ಯರಿಂದ,ಮತ್ತು ರಾಜ್ಯ ಹಾಗೂ ತಾಲೂಕು ಮಟ್ಟದ ಜಯಕರ್ನಾಟಕ ಕುಟುಂಬದ […]

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ಪಾಂಡುರಂಗನ ರಥೋತ್ಸವಕ್ಕೆ ಚಾಲನೆ ನೀಡಿದ ಅಂತರಾಜ್ಯ ಅನ್ನ ದಾಸೋಹ ಮಾಡುವಂತಾ” ರಾಷ್ಟ್ರೀಯ ಧರ್ಮಾಚಾರ್ಯ””ಬಸವ ಗೋಪಾಲ ರತ್ನ” ಹೀಗೆ ಅನೇಕ ಪ್ರಶಸ್ತಿಗಳನ್ನೂ ಪಡೆದುಕೊಂಡ ಚಕ್ರವರ್ತಿ ಅನ್ನ ದಾನೇಶ್ವರ ಅಪ್ಪಾಜಿ ಅವರು ಅಪಾರ ಭಕ್ತರನ್ನು ಹೊಂದಿದ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು.ಮೊನ್ನೆ ತಾನೆ ದಿನಾಂಕ 9/12/2021ರಂದು ನವದೆಹಲಿಯಲ್ಲಿ ಸ್ಕಿಲ್ ಬುಕ್ ಲೋಕಾರ್ಪಣೆ ಕಾರ್ಯಕ್ರಮದ ಜ್ಞಾನ, ವಿಜ್ಞಾನ ಹಾಗೂ ಅಧ್ಯಾತ್ಮಿಕ ಮಹಾ ಸಮ್ಮೇಳನದಲ್ಲಿ ಚಕ್ರವರ್ತಿ […]

ಹುಬ್ಬಳ್ಳಿ ಸರ್ಕಿಟ್ ಹೌಸ್ ದಲ್ಲಿ ಜಿಲ್ಕಾಧಿಕಾರಿ ನಿತೇಶ ಪಾಟೀಲ ಅವರು ಕೇಂದ್ರ ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಸರಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ.ಮತ್ತು ಕೇಂದ್ರ ಸರಕಾರದ ಹಣಕಾಸು ಮಂತ್ರಾಲಯದ ಮಹೇಶ ಕುಮಾರ ಅವರಿಗೆ ಜಿಲ್ಲೆಯ ಅತಿವೃಷ್ಠಿ( ಮಳೆ ಹಾನಿ) ಹಾನಿ ಕುರಿತು ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷೀಕೆ ಮೂಲಕ ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ., ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಹಾಗೂ ಕೃಷಿ, […]

Advertisement

Wordpress Social Share Plugin powered by Ultimatelysocial