ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ, ನಾಲ್ಕು ತಿಂಗಳ ಸೆರೆವಾಸದ ಬಳಿಕ ಸದ್ಯ ಹೊರಬಂದಿದ್ದಾರೆ.. ಜೈಲಿನಿಂದ ಹೊರಬಂದ ನಂತ್ರ ಸಾಕಷ್ಟು ಜನರು ನಟಿ ರಾಗಿಣಿ ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ಮೇಸೇಜ್ ಮಾಡುವ ಮೂಲಕ, ಫೋನ್ ಮಾಡುವ ಮೂಲಕ ನಿಂದಿಸಿದ್ದಾರೆ.. ಇದ್ರಿಂದಾಗಿ ತಮಗಾದ ನೋವನ್ನ ರಾಗಿಣಿ ಸದ್ಯ ಇನ್ಸ್ಟಾಗ್ರಾಂನಲ್ಲಿ ಲೈವ್ ಬರುವ ಮೂಲಕ ಹೇಳಿಕೊಂಡಿದ್ದಾರೆ.. ಸೆರೆವಾಸದ ಜೀವನದ ನೋವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.. ಜೀವನದ […]

ಮೊದಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.ಇಂದೂ ಕೂಡಾ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ 24 ರಿಂದ 25 ಪೈಸೆ ಹಾಗೂ ಡಿಸೇಲ್‌ ಬೆಲೆಯಲ್ಲಿ 30 ರಿಂದ 31 ಪೈಸೆಗಳಷ್ಟು ಏರಿಕೆಯಾಗಿದೆ.ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.85 ರೂಪಾಯಿಗಳಾಗಿದ್ದರೆ, ಲೀಟರ್‌ ಡಿಸೇಲ್‌ ಬೆಲೆ 78.03 ರೂಪಾಯಿಗಳಾಗಿದೆ. ಇನ್ನು […]

ಆಕಸ್ಮಿಕ ಬೆಂಕಿಯಿಂದ ಎರಡು ಟ್ರ್ಯಾಕ್ಟರ್ ಹಾಗೂ ರಾಗಿ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಗುಬ್ಬಿ ತಾಲೂಕಿನ ಕಿಟ್ಟ ಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೈಜಿನ್ ಸಬ್ ಎನ್ನುವವರಿಗೆ ಸೇರಿದ ರಾಗಿ ಹುಲ್ಲು ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿಯಿಂದ 60 ಸಾವಿರಕ್ಕಿಂತ ಹೆಚ್ಚು ಬೆಲೆಬಾಳುವ ಹುಲ್ಲು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಥಳಕ್ಕೆ ಅಗ್ನಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಗಿ ಹುಲ್ಲು ಹೊಗೆಯಿಂದ ಕೂಡಿದ್ದು ಬಳಕೆಗೆ ಬರದಂತ ಸ್ಥಿತಿಗೆ ಬಂದಿದೆ. […]

ಡ್ರಗ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನುಬಂಧಿಸಿದ್ದಾರೆ. ಕೇರಳ ಮೂಲದ ಅನಗೇಶ್ ,ಎಂ ಡಿ ಫರೀಸ್ ಎಂಬಾತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಅನಗೇಶ್ ,ಎಂ ಡಿ ಫರೀಸ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿಗಳ 1.3 ಲೀಟರ್ ಹ್ಯಾಶೀಶ್ ಆಯಿಲ್ ,2 […]

ಜ.22ರಂದು KSRTC ಚಾಲಕನಿಗೆ ಚಾಕು ಇರಿದು ಪರಾರಿಯಾಗಿದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಂತ ವೇಳೆಯಲ್ಲಿ, ಪರಾರಿಯಾಗಲು ಯತ್ನಿಸಿ ಪೊಲೀಸರ ಗುಂಡೇಟಿಗೆ ನರಳಿದ್ದಾರೆ. ಆರೋಪಿಗಾಗಿ ಬಲೆ ಬಿಸಿದ್ದ ಬಿಳಿಕೆರೆ ಠಾಣೆ ಪೊಲೀಸರು ಆರೋಪಿಗಳ ಇರುವ ಖಚಿತ ಮಾಹಿತಿಯನ್ನು ಪಡೆದು ಜಯಂತ್, ವಿಘ್ನೇಶ್ ಹಾಗೂ ದೀಪಕ್ ಬಂಧಿಸಿ ಕರೆದೊಯ್ಯುತ್ತಿದ್ದರು. ಹುಣಸೂರು ತಾಲೂಕಿನ ಹಂದನಹಳ್ಳಿ ಗೇಟ್ ಬಳಿ ಕರೆದೊಯ್ಯುತ್ತಿದ್ದಂತ ವೇಳೆಯಲ್ಲಿ ಆರೋಪಿ ಜಯಂತ್, ಹೆಡ್ ಕಾನ್ಸ್ ಟೇಬಲ್ ರವಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. […]

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದ್ದು, ಸಿನಿಮೀಯ ರೀತಿ ಜಯನಗರ ಠಾಣೆ ಪೊಲೀಸರು ಮನೆಗಳ್ಳನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ದೇವರ ಬೀಸನಳ್ಳಿ ನಿವಾಸಿ ಇಸ್ಮಾಯಿಲ್ ಬಂಧಿತ ಆರೋಪಿ, ಕಳೆದ ಒಂದು ವಾರದಲ್ಲಿ ನಾಲ್ಕು ಮನೆ ದೋಚಿ ಪರಾರಿಯಾಗಿದ್ದ ಖದೀಮ ಜಯನಗರ ಅಪಾರ್ಟ್ಮೆಂಟ್ ಒಂದರ ಬಳಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಬಂಧಿಸಲು ಮುಂದಾದ ಖಾಕಿ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲು ಮುಂದಾಗಿದ್ದಾನೆ, ಕೂಡಲೇ ಇನ್ಸ್ಪೆಕ್ಟರ್ […]

ಬೆಳ್ಳಂಬೆಳಗ್ಗೆ ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಭಾರಿ ಗಾತ್ರದ ವಾಹನವೊಂದು ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿದೆ.ದೊಡ್ಡ ಗಾತ್ರದ ವಾಹವನ್ನು ಅಂಡರ್ಪಾಸ್ ಮೂಲಕ ಚಲಾಯಿಸಲು ಚಾಲಕ ಪ್ರಯತ್ನಿಸಿರುವುದೇ ಘಟನೆಗೆ ಕಾರಣವಾಗಿದೆ. ಚಾಲಕನ ಅಜಾಗರೂಕತೆಯಿಂದ ಈ ಅವಘಡ ನಡೆದಿದೆ. ಮೆಟ್ರೋ ನಿಲ್ದಾಣದ ಅಂಡರ್ಪಾಸ್ನಲ್ಲಿ ಸಿಲುಕಿದ ಭಾರಿ ಗಾತ್ರದ ವಾಹನ ಬೆಳಗಿನ ಜಾವ 3.30 ರಿಂದ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ಮೆಟ್ರೋ ಅಧಿಕಾರಿಗಳು ವಾಹನವನ್ನು ತೆರವುಳಿಸುತ್ತಿದ್ದಾರೆ. TN-01 AQ-9079 ನಂಬರಿನ […]

ರಸ್ತೆಯಲ್ಲಿ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿದ್ದ ವೇಳೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಜಾರಿ ಬಿದ್ದು ಗಾಯಗಳಾಗಿವೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಎಳೆಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ, ಗುಟ್ಟೂರು ಗ್ರಾಮದ ಸುಬ್ರಮಣಿ ಬೈಕ್ ನಿಂದ ಬಿದ್ದು ಗಾಯಗಳಾದ ಹಿನ್ನೆಲೆ ಆಕ್ರೋಶಗೊಂಡ ಆತನ ತಂದೆ ಒಕ್ಕಣೆ ಮಾಡುತ್ತಿದ್ದ ಹುರುಳಿಗೆ ಬೆಂಕಿ ಹಚ್ಚಿದ್ದಾನೆ, ಸದ್ಯ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ರಾಬರ್ಟ್’ […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮೋಸ್ಟ್ ಅವೇಯ್ಟೆಡ್ ಸಿನಿಮಾ ರಾಬರ್ಟ್.. ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಮೂಡಿಬರ್ತಿದೆ.. ಸ್ಯಾಂಪಲ್ಸ್ ಮೂಲಕವೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ..ಇತ್ತೀಚೆಗಷೆ್ಟೀ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಟೀಸರ್ ರಿಲೀಸ್ ಆಗಿತ್ತು.. ಟಾಲಿವುಡ್ ಮಂದಿ ಕೂಡ ಟೀಸರ್ ನೋಡಿ ಬೆರಗಾಗಿದ್ರು.. ಇದೀಗ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಸಾಂಗ್ ಕೂಡ ರಿಲೀಸ್ ಆಗಿದೆ.. ಈ […]

ರಾತ್ರಿ ಬಸ್ ನಿಲ್ದಾಣದಲ್ಲೇ ತಂಗಿದ್ದ ಮಹಿಳೆ ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಯಾದಗಿರಿಯ ಜಿಲ್ಲೆಯ ಸುರಪುರ ನಗರದ ವೆಂಕಟಪ್ಪ ನಾಯಕ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಣಸಗಿ ತಾಲೂಕಿನ ಹೆಬ್ಬಾಳ ಗ್ರಾಮದ ಶಾಂತಾ ಶವದ ರೂಪದಲ್ಲಿ ಪತ್ತೆಯಾಗಿದ್ದಾರೆ.ಸ್ಥಳಕ್ಕೆ ಆಗಮಿಸಿದ ಸುರಪುರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:ಬೈಕ್ ಸರ್ವಿಸ್ ಸೆಂಟರ್ ಗೆ ತಗುಲಿದ […]

Advertisement

Wordpress Social Share Plugin powered by Ultimatelysocial