ಟ್ರ್ಯಾಕ್ಟರ್ ಪಲ್ಟಿಯಾಗಿ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕಲ್ಲೂರು ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿ ಯಲ್ಲಮ್ಮ‌ಗಂಡ ಭೀಮರಾವ ಎಂದು ತಿಳಿದುಬಂದಿದ್ದು,  ಬಿಸಿಲಿನ ತಾಪಕ್ಕೆ ಟ್ರ್ಯಾಕ್ಟರ್‌ನ ಮುಂದಿನ ಟೈರ್‌ ಸಿಡಿದು ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಟ್ರಾಕ್ಟರ್ನಲ್ಲಿದ್ದ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡ ‌ಎಲ್ಲರನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ: `ರಾಬರ್ಟ್’ ಚಿತ್ರದ ವಿಜಯಯಾತ್ರೆ ರದ್ದು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಸದ್ಯ ಎಲ್ಲೆಡೆ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫಿಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿದ್ದು, ಇನ್ನೇನು ನೂರು ಕೋಟಿಗೆ ಸನಿಹದಲ್ಲಿದೆ. ಸಿನಿಮಾ ಹೀಗೆ ಅದ್ಭುತ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಇದೇ ತಿಂಗಳ ೨೯ ರಿಂದ ಏಪ್ರಿಲ್ 1 ರವರೆಗೂ ಕರ್ನಾಟಕದಾದ್ಯಂತ ವಿಜಯಯಾತ್ರೆ ನಡೆಸಿ ಅಭಿಮಾನಿಗಳಿಗೆ ಕೃತಜ್ಞತೆ […]

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಲಂಬಾಣಿ ತಾಂಡ್ಯದಲ್ಲಿ ಹೋಳಿ ಹಬ್ಬ ಆಚರಣೆ ಮಾಡಿದರು. ಹೆಣ್ಣುಮಕ್ಕಳ ಜೊತೆಯಲ್ಲಿ “ಲಂಬಾಣಿಯ ನೃತ್ಯ” ಮಾಡುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಿ ಮಾತನಾಡಿದವರು, ನಮ್ಮ ಹಳ್ಳಿಯ ಸಂಸ್ಕೃತಿ ಸೊಗಡೆ ಚಂದ. ಕಾರ್ಯನಿಮಿತ್ತ  ಹಳ್ಳಿಗೆ ತೆರಳಿದ್ದಾಗ ಹೆಣ್ಣುಮಕ್ಕಳ ಜೊತೆ ಅವರ ಶೈಲಿಯಲ್ಲಿ ಹೋಳಿ ಹಬ್ಬದ ಅಂಗವಾಗಿ ಕಳೆದ ಸಂತಸದ ಸಂದರ್ಭ ಇದಾಗಿತ್ತು ಎಂದು ಹಿರಿಯೂರಿನ ಶಾಸಕರು. ಇದನ್ನೂ ಓದಿ: ರಾಜ್ಯ ಸರ್ಕಾರದ […]

ಹೊಸ ಕಾಂಗ್ರೆಸ್ ಕಾರ್ಯಾಲಯವನ್ನು  ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟನೆ ಮಾಡಿದ್ದಾರೆ.ಸಭೆಯಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಬಿಜೆಪಿಯ ಪಕ್ಷದ ಸೊಲು ಬಸವಕಲ್ಯಾಣದಿಂದಲೇ ಶುರುವಾಗಬೇಕು, ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ, ನಾವು ಕಾಂಗ್ರೆಸ್ ಪಕ್ಷದವರೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಬಿ.ನಾರಾಯಣ ಅವರನ್ನು ಬಹುಮತದಿಂದ ಗೆಲ್ಲಿಸಬೇಕು . ಎಂದು ಕಾರ್ಯಕರ್ತರಿಗೆ‌  ಹೇಳಿದ್ದಾರೆ ಇದನ್ನೂ ಓದಿ: ವಿಷಾನಿಲ ಸೋರಿಕೆಯಿಂದ ಕಾರ್ಮಿಕ ಸಾವು.!

ಕೆಮಿಕಲ್ ಫ್ಯಾಕ್ಟರಿಯಿಂದ ವಿಷಾನಿಲ ಸೋರಿಕೆಯಿಂದಾಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ರಾಯಚೂರಿನ ಕೈಗಾರಿಕಾ ವಲಯದ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಜೆವೈ ಫಾರ್ಮ್ ಕಾರ್ಖಾನೆಯಲ್ಲಿ ವಿಷಪೂರಿತ ಅನಿಲ ಸೋರಿಕೆಯಿಂದಾಗಿ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಧ್ರ ಮೂಲದ ರಂಗ (೨೮) ಮೃತ ದುರ್ದೈವಿ ಮತ್ತು ಉಳಿದ 4 ಜನರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಈ ಕಾರ್ಖಾನೆಯು 3 ತಿಂಗಳಿಂದೆಯಷ್ಟೇ ಪ್ರಾರಂಭವಾಗಿದ್ದು,  ಕಾರ್ಖಾನೆಯ ಹೆಸರಾಗಲೀ, ದಾಖಲಾತಿಯಾಗಲೀ, ಲೈಸೆನ್ಸ್ ಯಾವುದೂ ಇಲ್ಲ. ಇನ್ನು ದುರಂತ ಆದ […]

ಆಟೋ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸತೀಶ್ ಹಾಗೂ ವಸಂತ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಬರೋಬ್ಬರಿ 45 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ವಿಶಾಖಪಟ್ಟಣಂನಿಂದ  ರೈಲಿನ ಮೂಲಕ ಬೆಂಗಳೂರಿಗೆ ಗಾಂಜಾ ತಂದು ಸಣ್ಣ ಸಣ್ಣ ಪ್ಯಾಕೇಟ್ ಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್.!

ವಿಧಾನಸಭೆ ಬಜೆಟ್‌ ಅಧಿವೇಶನವನ್ನು ಮೊಟಕುಗೊಳಿಸಿದನ್ನು ಖಂಡಿಸಿ ವಾಟಾಳ್ ನಾಗರಾಜ್ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಕರಾಳ ದಿನಾಚರಣೆಯನ್ನು  ಆಚರಿಸಿದ್ದಾರೆ. ಬಳಿಕ ಮಾತನಾಡಿದ ವಾಟಲ್ ಸ್ಪೀಕರ್  ಸಿಎಂ ಯಡಿಯೂರಪ್ಪರ ರಬ್ಬರ್ ಸ್ಟಾಂಪ್ ಆಗಿದ್ದಾರೆ, ಈ ಬೆಳವಣಿಗೆ ಪ್ರಜಾ ಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ, ಶಾಸಕರ ಮೇಲೆ ಏಕಪತ್ನಿವ್ರತದ ಮೇಲೆ ಚರ್ಚೆ ಮಾಡಿರುವುದು ಅಗೌರವ ಅನೈತಿಕ ಕೆಟ್ಟ ಚಿಂತನೆ ಎಂದು ಸರ್ಕಾರದ ವಿರುದ್ಧ ವಾಟಾಳ್ ಕಿಡಿಕಾರಿದ್ದಾರೆ.ಇದಲ್ಲದೆ ಆಡಳಿತ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜ್ಯದ ಸಮಸ್ಯೆಗಳನ್ನು […]

ಸಿಡಿ ಕೇಸ್‌ನಲ್ಲಿ ಸಿಲುಕಿರುವ ಯುವತಿಗೆ ರಕ್ಷಣೆ ಕೊಡುವುದಾಗಿ ಇದಾಗಲೇ ಕಾಂಗ್ರೆಸ್‌ನ ಹಲವಾರು ಶಾಸಕಿಯರು ಮುಂದೆ ಬಂದಿರುವ ಬೆನ್ನಲ್ಲೇ ಇದೀಗ ಸಚಿವೆ ಶಶಿಕಲಾ ಜೊಲ್ಲೆ ಕೂಡ ರಕ್ಷಣೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಜೊಲ್ಲೆ 2ನೇ ವಿಡಿಯೋದಲ್ಲಿ ಆ ಯುವತಿ ಏನು ಹೇಳಿದ್ದಾರೆ ನೋಡಿಲ್ಲ. ಗೃಹ ಸಚಿವ ಬೊಮ್ಮಾಯಿ ಅವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಆ ಮಹಿಳೆಗೆ ರಕ್ಷಣೆ ಕೊಡುವುದಾಗಿ ಸದನದಲ್ಲಿ ಹೇಳಿದ್ದಾರೆ. ಈಗ ನಮ್ಮಿಂದ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. […]

ಸಿಡಿ ಸಂತ್ರಸ್ಥೆ ರಿಲೀಸ್ ಮಾಡಿರುವ 2ನೇ ವಿಡಿಯೋ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ನಾನು ಎಸ್ಐಟಿ ತನಿಖೆಯಲ್ಲಿ ಇಂಟರ್ ಫಿಯರ್ ಆಗಲ್ಲ, ಎಸ್.ಐ.ಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಸದ್ಯ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದುಕೊಂಡಿದ್ದೇವೆ, ಯುವತಿಯ ಅಪೇಕ್ಷೆಯಂತೆ  ಯುವತಿಗೂ ಅವರ ಪೋಷಕರಿಗೂ ರಕ್ಷಣೆ ಕೊಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ […]

ದೇವಿ ಆರಾಧಕರೆಂದು ಹೇಳಿಕೊಂಡು  ವೃದ್ಧೆಯನ್ನು ಯಾಮಾರಿಸಿ  ಮಾಂಗಲ್ಯ ಸರ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕೋಲಾರ ನಗರದ ಕುಂಬಾರಪೇಟೆಯಲ್ಲಿ ನಡೆದಿದೆ. ನಗರದಲ್ಲಿ ಮಡಿಕೆ ವ್ಯಾಪಾರ ಮಾಡುತ್ತಿದ್ದ ಯಶೋಧಮ್ಮನ ಬಳಿ ಮಡಿಕೆ ಖರೀದಿಸುವ ಸೋಗಿನಲ್ಲಿ ಬಂದು, ಮಾಂಗಲ್ಯ ಸರವನ್ನು  ಮಡಿಕೆಯಲ್ಲಿ ಹಾಕಿ ಪೂಜೆ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾರೆ, ಕಳ್ಳರನ್ನು ನಂಬಿದ ವೃದ್ಧೆ  ಮಾಂಗಲ್ಯ ಸರವನ್ನು ಮಡಿಕೆಯಲ್ಲಿ ಹಾಕಿದ್ದಾರೆ. ಇನ್ನು ಸರವನ್ನು ಕದ್ದ ಕಳ್ಳರು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಸದ್ಯ ಕಳ್ಳರಿಗಾಗಿ […]

Advertisement

Wordpress Social Share Plugin powered by Ultimatelysocial