ನಗರದ ಕತ್ರಿಗುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ ಸುಮಾರು 25ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಹೊಡೆದು ಪುಂಡಾಟಿಕೆ ಮೆರೆದಿದ್ದಾರೆ. ನಿನ್ನೆ ಸಂಜೆ  ಸುಮಾರು 6:30 ರ ಸಮಯದಲ್ಲಿ  ಮದ್ಯದ ಅಮಲಿನಲ್ಲಿ ವಾಹನಗಳ ಮೇಲೆ ಮಚ್ಚಿನಿಂದ ಹೊಡೆದಿದ್ದಾರೆ. ಈ ಪರಿಣಾಮ ಕಾರಿನ ಗಾಜುಗಳು ಸಂಪೂರ್ಣ  ನುಚ್ಚುನೂರಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಕತ್ರಿಗುಪ್ಪೆಯ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ.  ಇನ್ನು ಸಿಲಿಕಾನ್ […]

ಬಿಜೆಪಿ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ  ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರ ಗ್ರಾಮದಲ್ಲಿ ನಡೆದಿದೆ.ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಸಂಗನಗೌಡ ಎಂದು ಗುರುತಿಸಲಾಗಿದ್ದು, ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕ ಮೇಲೆ ಹಲ್ಲೆ.!

ಕುಡಿದ ಮತ್ತಿನಲ್ಲಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಗ್ರಾಮದಲ್ಲಿ ಕುಡುಕರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಆಳಂದ ಪಟ್ಟಣದ ನಿವೃತ್ತ ಸೈನಿಕ ಹರಿನಂದ ಅವರ ಮೇಲೆ ಕುಡುಕರು ಹಲ್ಲೆ ಎಸಗಿದ್ದಾರೆ.   ಹರಿನಂದ ಅವರು ನಡೆಸುತ್ತಿರುವ ಹೋಟೆಲ್‌ಗೆ ನುಗಿದ್ದ ಇಬ್ಬರು ಕುಡುಕರು ಕ್ಷುಲಕ ಕಾರಣಕ್ಕೆ ಹರಿನಂದ ಅವರ ಮೇಲೆ ಅಮಾನುಶವಾಗಿ ಹಲ್ಲೆ ಮಾಡಿ ಎಸ್ಕೇಪ್‌ಆಗಿದ್ದಾರೆ. ಸದ್ಯ ಈ ಇಬ್ಬರು […]

ಕ್ರಷರ್ ಸಿಡಿಮದ್ದು  ಬ್ಲಾಸ್ಟಿಂಗ್ ಶಬ್ಧಕ್ಕೆ 4 ತಿಂಗಳ ಹಸುಗೂಸು ಬೆಚ್ಚಿಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯ ಬಳಿಕ ಮಗುವಿನ ಪೊಷಕರು ಪಕ್ಕದಲ್ಲೇ ಇದ್ದ ಹಳ್ಳದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾಗಿದ್ದಾರೆ.   ಶವಸಂಸ್ಕಾರ ಮಾಡಿದ್ದನ್ನು ಕಂಡ ಸ್ಥಳೀಯ ಖಾಸಗಿ ಗಾರ್ಮೆಂಟ್ಸ್ ಸಿಬ್ಬಂದಿ ಅಂತ್ಯಸಂಸ್ಕಾರವಾಗಿದ್ದ ಗುಂಡಿಯಿಂದ ಮಗುವನ್ನು ಹೊರತೆಗೆಸಿ ,ಇದು ನಮ್ಮ ಜಾಗ ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ ಎಂದು ಅವರನ್ನು ಅಲ್ಲಿಂದ ಹೊರ ಕಳಿಸಿ […]

ಬೆಳ್ಳಂ ಬೆಳ್ಳಗೆ ಮನೆಗೆ ಎಂಟ್ರಿ ಕೊಟ್ಟ ಅತಿಥಿ ಚಿರತೆ ಮನೆಯ ಕೋಣೆಯೊಳಗೆ ಬಂಧಿಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ಆಹಾರ ಹುಡುಕಿ ಬಂದಿದ್ದ ಚಿರತೆ.   ನಾಯಿಯನ್ನು ಬೆನ್ನಟ್ಟಿ ಚಿರತೆ ಮನೆ ಕೋಣೆಯೊಳಗೆ ನುಗ್ಗಿ ಮನೆಯೊಳಗೆ ಲಾಕ್‌ ಆಗಿದೆ. ‌ಮನೆಯ ಕೋಣೆಯೊಳಗೆ ಚಿರತೆಯ ಸದ್ದು ಕೇಳಿ ಮನೆಯವರು ಎಚ್ಚೇತ್ತುಕೊಂಡು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ .ಸದ್ಯ ಚಿರತೆನ್ನು ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: […]

ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿ ಇಡಲಾಗಿದ್ದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೀತಾ ಮಂದಿರದಿಂದ ಅಯೋಧ್ಯೆಯ ರಾಮ ಮಂದಿರಕ್ಕೆ ವಿಶೇಷ ಕಲ್ಲನ್ನು ನೀಡಲಾಗಿದೆ ಎಂದು ಕೊಲಂಬೊದಲ್ಲಿರುವ ಭಾರತ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡಿದೆ. ರಾಮಮಂದಿರ ನಿರ್ಮಾಣಕ್ಕೆ ಎಲಿಯಾದಿಂದ ಸೀತಾ ಕಲ್ಲನ್ನು ನೀಡುತ್ತಿದ್ದು, ಇದು ಭಾರತ ಹಾಗೂ ಶ್ರೀಲಂಕಾ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲಿದೆ. ಇದನ್ನೂ ಓದಿ: ಈ ದೇಶವೇ ನೋಡಿ ಅತ್ಯಂತ ಸಂತೋಷ ಭರಿತ ರಾಷ್ಟ್ರ.!

2021 ರ ವಿಶ್ವ ಸಂತೋಷ ದಿನದ  ವರದಿಯನ್ನು ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಬಿಡುಗಡೆ ಮಾಡಿದ್ದು, 149 ಸ್ಥಾನಗಳ ಪೈಕಿ ಭಾರತ 139ನೇ ಸ್ಥಾನ ಪಡೆದಿದೆ. ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಲು ಪ್ರಾರಂಭಿಸಿತ್ತು. ಆದರೆ ಈ ಸಂತೋಷದ ದಿನವನ್ನು ಮೊದಲಿಗೆ ಭೂತಾನ್ ನಲ್ಲಿ 1970 ದಶಕದಲ್ಲಿ ಆಚರಣೆ ಮಾಡಲಾಗಿತ್ತು,ರಾಷ್ಟ್ರೀಯ ಆದಾಯಕ್ಕಿಂತ ರಾಷ್ಟ್ರೀಯ ಸಂತೋಷವೇ ಹೆಚ್ಚು ಎಂದ ಭೂತಾನ್‌ ಎಂದ ಸರ್ಕಾರ ವಿಶ್ವಸಂಸ್ಥೆಗೆ ಮಾದರಿಯಾಗಿದೆ. […]

ಬರೋಬ್ಬರಿ 54 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಂಜಾಬ್‌ ಲುಧಿಯಾನ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು 15 ಅಂತರರಾಜ್ಯ ಡ್ರಗ್‌ ಪೆಡ್ಲರ್‌ ಗಳು 67 ಲಕ್ಷ ಮಾದಕ ಮಾತ್ರೆಗಳು, ಕ್ಯಾಪ್ಸುಲ್ಗಳು, ಲಸಿಕೆಗಳು ಹಾಗೂ ಸಿರಪ್‌ ಗಳ ಸಾಗಾಟಕ್ಕೆ ಪ್ಲಾನ್‌ ಹಾಕಿದ್ರು. ಆದರೆ ಈ ವೇಳೆ ಖದೀಮರ ಪ್ಲಾನ್‌ ಗೆ ಪಂಜಾಬ್‌ ಪೊಲೀಸರು ತಣ್ಣೀರು ಎರಚಿದ್ದಾರೆ. ಪಂಜಾಬ್‌ ಲುಧಿಯಾನ ಗಡಿ ಭಾಗದಲ್ಲಿ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು 15 […]

ನವದೆಹಲಿ, ಮಾರ್ಚ್ 18: “ಅರೆಬರೆ ಹರಿದ ಜೀನ್ಸ್ ತೊಟ್ಟ ಮಹಿಳೆ ಸಮಾಜಕ್ಕೆ ಯಾವ ಸಂದೇಶ ನೀಡಬಲ್ಲಳು” ಎಂದು ಗುರುವಾರ ಉತ್ತರಾಖಂಡ ನೂತನ ಸಿಎಂ ತೀರಥ್ ಸಿಂಗ್ ರಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆಯೇ ಸೃಷ್ಟಿಯಾಗಿದೆ. ರಿಪ್ಡ್ ಜೀನ್ಸ್ ತೊಡುವ ಮಹಿಳೆಯರ ಕುರಿತು ಸಿಎಂ ಈ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ರಿಪ್ಡ್ ಜೀನ್ಸ್ ಟ್ರೆಂಡ್ ಶುರುವಾಗಿದೆ. ನಟಿಯರೊಳಗೊಂಡಂತೆ ಹಲವು ಮಹಿಳೆಯರು ತಾವು […]

ಪತ್ರಕರ್ತ, ಸಂಪಾದಕ, ಹಾಯ್ ಬೆಂಗಳೂರು ವಾರಪತ್ರಿಕೆಯ ವಾರಸುದಾರ ದಿ.ರವಿ ಬೆಳಗೆರೆಯವರ 63ನೇ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಹಾಯ್ ಬೆಂಗಳೂರು ಕಚೇರಿಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇನ್ನು ಮಕ್ಕಳಾದ ಭಾವನಾ ಬೆಳಗೆರೆ, ಚೇತನಾ ಬೆಳಗೆರೆ ಹಾಗೂ ಮಗ, ಕರ್ಣ ಬೆಳಗೆರೆ ಕಾರ್ಯಕ್ರಮವನ್ನ ನೇರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿಶೇಷವಾಗಿ “ನನ್ನ ನೆರಳಿನ ದೀಪ” ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ : ನೀರಿಗಾಗಿ ಪಂಚಾಯಿತಿಗೆ ಮುತ್ತಿಗೆ ಹಾಕಿದ […]

Advertisement

Wordpress Social Share Plugin powered by Ultimatelysocial