ಡಿಕೆಶಿ ಮೇಲೆ ಭ್ರಷ್ಟಾಚಾರ ಆರೋಫ;ಡಿಕೆಶಿಯವರ ಸಿಎಂ ಕನಸಿಗೆ ಸ್ವಪಕ್ಷೀಯರಿಂದಲೇ ತಣ್ಣೀರು: ಬಿಜೆಪಿ ವ್ಯಂಗ್ಯ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಲಂಚ, ಭ್ರಷ್ಟಾಚಾರದ ಟೀಕೆಯ ರೀತಿಯ ಹೇಳಿಕೆಗಳನ್ನು ಕೆಪಿಸಿಸಿ ಕಚೇರಿಯಲ್ಲಿ ಅವರದ್ದೇ ಪಕ್ಷದ ಇಬ್ಬರು ನಾಯಕರು ಹೇಳಿದ್ದು ಬಯಲಾಗುತ್ತಿದ್ದಂತೆ ಬಿಜೆಪಿ ಡಿ ಕೆ ಶಿವಕುಮಾರ್ ವಿರುದ್ಧ ಟೀಕೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ನಿಮ್ಮದೇ ಪಕ್ಷದ ನಾಯಕರಾದ ವಿ ಎಸ್ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ.

 

 

 

 

 

 

 

 

 

 

ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಪ್ರಶ್ನೆ ಮಾಡಿದೆ. ಮುಂದುವರಿದು ಟ್ವೀಟ್ ಮೂಲಕ ತಿವಿದಿರುವ ಬಿಜೆಪಿ, ಮುಖ್ಯಮಂತ್ರಿಯಾಗುವ ನಿಮ್ಮ ಕನಸಿಗೆ ನಿಮ್ಮದೇ ಪಕ್ಷದ ನಾಯಕರು ಎಳ್ಳು ನೀರು ಬಿಡುತ್ತಿದ್ದಾರೆ. ನಿಮ್ಮ ಅಧ್ಯಕ್ಷಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ವಪಕ್ಷೀಯರೇ ಷರಾ ಬರೆದಿಟ್ಟಿದ್ದಾರೆ. ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳಡಿಕೆಶಿ ಪದಚ್ಯುತಿಎಂಬ ಮಾಸ್ಟರ್ಪ್ಲ್ಯಾನ್ ಭಾಗವೇ? ಎಂದು ವ್ಯಂಗ್ಯವಾಡಿದೆ. ನಿಮ್ಮ ಮೇಲೆ ಎದ್ದಿರುವ ಭ್ರಷ್ಟಾಚಾರ, ಹಗರಣ ಅನುಮಾನಗಳಿಗೆ ಉತ್ತರ ಕೊಡಿ ಎಂದು ಬಿಜೆಪಿ ಒತ್ತಾಯಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬ್ರೇಕ್ ಹಾಕುತ್ತಾ ಕೋಲ್ಕತ್ತ ನೈಟ್ ರೈಡರ್ಸ್..?

Wed Oct 13 , 2021
ಇಂದು  ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬ್ರೇಕ್‌ ಹಾಕಲು ಕೋಲ್ಕತ್ತ ನೈಟ್ ರೈಡರ್ಸ್ ಬಳಗವಿದೆ. ಸೋಮವಾರ ನಡೆದ ಎಲಿಮಿನೇಟರ್‌ನಲ್ಲಿ ಸುನೀಲ್ ನಾರಾಯಣ್ ಆಲ್‌ರೌಂಡ್ ಆಟದ ಪ್ರದರ್ಶನದಿಂದ ಕೋಲ್ಕತ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಗಳಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಆಟಗಾರರಾದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಉತ್ತಮ […]

Advertisement

Wordpress Social Share Plugin powered by Ultimatelysocial