ಧ್ರುವ ಸರ್ಜಾ ನಾಯಕರಾಗಿರುವ ‘ಮಾರ್ಟಿನ್‌’ ಸಿನಿಮಾ  ಚಿತ್ರೀಕರಣಕ್ಕೂ ಮುನ್ನವೇ ತನ್ನ ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇತ್ತೀಚೆಗಷ್ಟೇ ಕಂಪ್ಲೀಟ್‌ ಆಗಿದ್ದು ಒಂದೇ ಫೈಟ್‌ಗೆ ಭಾರತೀಯ ಚಿತ್ರರಂಗದ ಖ್ಯಾತ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ.ಹೌದು, ಮಾರ್ಟಿನ್‌ ಚಿತ್ರದ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು […]

ರಾಜ್‍ ಕಪೂರ್ 1924ರ ಡಿಸೆಂಬರ್ 14ರಂದು ಜನಿಸಿದರು. ಈತ ತನ್ನ ಬಾಲ್ಯದ ದಿನಗಳಲ್ಲಿ ತಂದೆ ಪೃಥ್ವಿರಾಜ್ ಕಪೂರ್‌ಗೆ “ನಿನ್ನನ್ನು, ನನ್ನ ತಂದೆ ಎಂದು ಈ ಜಗತ್ತು ಗುರುತಿಸುತ್ತದೆಯೇ ವಿನಃ ನನ್ನನ್ನು ಈ ಜಗತ್ತು ನಿನ್ನ ಮಗ ಎಂದು ಗುರುತಿಸುವುದಿಲ್ಲ” ಎಂದು ಹೇಳುತ್ತಿದ್ದರಂತೆ. ರಾಜ್ ಕಪೂರ್ ಪೃಥ್ವಿ ಥಿಯೇಟರಿನಲ್ಲಿ ಮೊದಲು ಬಾಲ ಕಲಾವಿದನಾಗಿ (ದಿವಾರ್) ನಂತರ ಯುವ ಕಲಾವಿದನಾಗಿ (ಪಠಾಣ್) ಚಿತ್ರದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಸಿನಿಮಾ ಸೆಟ್ […]

  ಪೂರ್ಣಿಮಾ ಮಾಳಗಿಮನಿ ಮೂಲತಃ ಶಿವಮೊಗ್ಗ ಜಿಲ್ಲೆಯ ಹನುಮಂತಪುರದವರು. ತಮಗೆ ಬಡತನವಿದ್ದರೂ ಮಗಳಿಗೆ ವಿದ್ಯಾಭ್ಯಾಸ ದೊರಕಬೇಕೆಂಬ ಆಶಯವುಳ್ಳ ಪೋಷಕರ ಪ್ರೋತ್ಸಾಹದಿಂದ ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿ, ಚಿತ್ರದುರ್ಗದ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಪದವಿ ಗಳಿಸಿದರು.ಪದವಿ ಪಡೆದ ಪೂರ್ಣಿಮಾ ಮಾಳಗಿಮನಿ ಮಿಲಿಟರಿ ಸೇರುತ್ತೇನೆಂದಾಗ ಅಪ್ಪ – ಅಮ್ಮ ಲೋಕದ ಕೊಂಕಿಗೆ ತಲೆ ಕೆಡಿಸಿಕೊಳ್ಳದೆ ಮಿಲಿಟರಿ ಸೇರಲು ಒಪ್ಪಿದರು. ಬೆಂಗಳೂರು ಕೂಡ ನೋಡಿರದ ಪೂರ್ಣಿಮಾ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿ […]

ನೌಶಾದ್ ಅಲಿ 1919ರ ಡಿಸೆಂಬರ್‌ 25ರ ಕ್ರಿಸ್‌ಮಸ್‌ ದಿನ ಲಖನೌನಲ್ಲಿ ಜನಿಸಿದರು. ಅವರ ತಂದೆ ವಾಹಿದ್ ಅಲಿ ಕೋರ್ಟಿನಲ್ಲಿ ಮುನ್ಷಿ ಅಗಿದ್ದರು. ನೌಶಾದ್ ಚಿಕ್ಕಂದಿನಲ್ಲಿ ಲಕ್ನೋದಿಂದ 25 ಕಿಲೋಮೀಟರ್ ದೂರದಲ್ಲಿದ್ದ ಬರಬಾಂಕಿ ಸಮೀಪದ ದೇವಾ ಷರೀಫ್ ವಾರ್ಷಿಕ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು. ಅದು ಎಲ್ಲ ಪ್ರಸಿದ್ಧ ಸಂಗೀತಗಾರರೂ ಒಂದೆಡೆ ಕಾರ್ಯಕ್ರಮ ನೀಡುವ ತಾಣವಾಗಿತ್ತು. ಇದು ಚಿಕ್ಕಂದಿನಲ್ಲೇ ಇವರ ಮೇಲೆ ಸಂಗೀತದ ಪ್ರಭಾವ ಬೀರಿತು. ಅಲ್ಲಿ ಅವರು ಉಸ್ತಾದ್ ಗುರ್ಬತ್ ಅಲಿ ಯುಸುಫ್ […]

ಅನಸೂಯಾ ರಾಮರೆಡ್ಡಿ ಚಿತ್ರದುರ್ಗದ ಬಳಿಯ ತುರುವನೂರು ಎಂಬಲ್ಲಿ 1929ರ ಡಿಸೆಂಬರ್‌ 25ರಂದು ಜನಿಸಿದರು. ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ. ರಾಮರೆಡ್ಡಿ. ತಾಯಿ ಮಂಗಳಮ್ಮ. ಇವರ ಮನೆತನವೇ ಒಂದು ರೀತಿಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ಯಾವಾಗಲೂ ಮನೆಯಲ್ಲಿ ಕಾಂಗ್ರೆಸ್ ನೇತಾರರು ತುಂಬಿರುತ್ತಿದ್ದರು. ಇದು ಬೆಳೆಯುತ್ತಿದ್ದ ಅನಸೂಯ ಅವರ ಮೇಲೂ ಪ್ರಭಾವ ಬೀರಿತು. ಬದುಕಿನುದ್ದಕ್ಕೂ ಗಾಂಧೀಜಿಯವರ ಆದರ್ಶಗಳನ್ನು ರೂಢಿಸಿಕೊಂಡರು. ತುರುವನೂರು ಊರು ಚಿಕ್ಕದಾಗಿದ್ದರೂ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸರಳ ವಿವಾಹ, ಚರಕದಲ್ಲಿ ನೂಲುವುದು, […]

ಪ್ರತಿಭಾ ನಂದಕುಮಾರ್ ಬೆಂಗಳೂರಿನವರು. ಅವರು 1955ರ ಡಿಸೆಂಬರ್ 25ರಂದು ಜನಿಸಿದರು. ತಂದೆ ವಿ. ಎಸ್. ರಾಮಚಂದ್ರರಾವ್. ತಾಯಿ ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದರು. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದರು.ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ […]

ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ ಮತ್ತು ಸಾಹಿತ್ಯಾಭಿಮಾನಿ ಬಳಗದಲ್ಲಿಅವರು ಕಿರಂ ಎಂದೇ ಚಿರಪರಿಚಿತರು.ಕಿತ್ತಾನೆ ರಂಗಪ್ಪ ನಾಗರಾಜ ಅವರು 1943ರ ಡಿಸೆಂಬರ್ 25ರಂದು ಹಾಸನ ಜಿಲ್ಲೆಯ ಕಿತ್ತಾನೆಯಲ್ಲಿ ಜನಿಸಿದರು. ಕಿತ್ತಾನೆಯಲ್ಲಿ ಪ್ರಾಥಮಿಕ ಅಭ್ಯಾಸವನ್ನು ಪೂರ್ಣಗೊಳಿಸಿದರು. ಬಿ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಡೆದು, ಎಂ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಳಿಸಿದರು.ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ […]

ಚಾರಲ್ಸ್ ಬಾಬೇಜ್ ನೈಋತ್ಯ ಇಂಗ್ಲೆಂಡಿನ ಡೆವೆನ್‍ಷೈರ್ ಕೌಂಟಿಯ ಟೈನ್‍ಮಾತ್ ಎಂಬಲ್ಲಿ 1792 ಡಿಸೆಂಬರ್ 26ರಂದು ಜನಿಸಿದ. ತಂದೆ ಬ್ಯಾಂಕರ್ ಆಗಿ ಕೆಲಸಮಾಡುತ್ತಿದ್ದರು. ಇದರಿಂದಾಗಿ ಬಾಬೇಜನಿಗೆ ಮುಂದೆ ಸಾಕಷ್ಟು ಪಿತ್ರಾರ್ಜಿತ ಹಣ ದೊರೆಯಿತು. ಹದಿನೆಂಟನೆಯ ವಯಸ್ಸಿನಲ್ಲಿ ಕೇಂಬ್ರಿಜನ್ನು ಸೇರಿ (1810) ವಿದ್ಯಾಭ್ಯಾಸ ಮುಂದುವರಿಸಿದ. ಇಂಗ್ಲೆಂಡಿನ ಖಗೋಳವಿಜ್ಞಾನಿ ಜಾನ್ ಫ್ರೆಡರಿಕ್ ವಿಲಿಯಮ್ ಹರ್ಷೆಲ್ (1792-1871) ಎಂಬವನೊಡಗೂಡಿ ಅನಲಿಟಿಕ್ ಸೊಸೈಟಿ ಎಂಬ ಸಂಘ ಸ್ಥಾಪಿಸಿದ (1815). ಈತ ಒಂದು ಕಾಲಕ್ಕೆ ಕೇಂಬ್ರಿಜಿನಲ್ಲಿ ಗಣಿತವಿಜ್ಞಾನ ಪ್ರಾಧ್ಯಾಪಕನಾಗಿ […]

ಮಾಲತಿ ಪಟ್ಟಣಶೆಟ್ಟಿ ಅವರು 1940ರ ಡಿಸೆಂಬರ್ 26ರಂದು ಕೊಲ್ಹಾಪುರದಲ್ಲಿ ಜನಿಸಿದರು. ತಂದೆ ಶಾಂತೇಶ ಬಸವಣ್ಣೆಪ್ಪ ಕೋಟೂರ ಅವರು ಮತ್ತು ತಾಯಿ ಶಿವಗಂಗಾ ಅವರು. ಮಾಲತಿ ಅವರ ವಿದ್ಯಾಭ್ಯಾಸ ಧಾರವಾಡದಲ್ಲಿ ನೆರವೇರಿತು. ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಮಾಲತಿ ಪಟ್ಟಣಶೆಟ್ಟಿ ಅವರು ಬೆಳಗಾವಿಯ ರಾಣಿ ಪಾರ್ವತಿದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಬೋಧನ ವೃತ್ತಿ ಪ್ರಾರಂಭಿಸಿದರು. ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ […]

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಚಿಂತಲಪಲ್ಲಿ ಪರಂಪರೆ ಕುರಿತು 800 ವರ್ಷಗಳಷ್ಟು ಇತಿಹಾಸ ಕಾಣಲು ಸಿಗುತ್ತದೆ. ಕಳೆದ ಶತಮಾನದಲ್ಲಿ ಸಹಾ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಚಂದ್ರರಾಯರು ಮೈಸೂರು ಸಾಮ್ರಾಜ್ಯದಲ್ಲಿ ಪಡೆದ ಖ್ಯಾತಿಯ ಬೆನ್ನಲ್ಲೇ ಅದೇ ಕಾಲದಲ್ಲಿ ಆ ಪರಂಪರೆಯ ಬೆಳಕಿನಲ್ಲಿ ಬೆಳಗಿದ ವಿದ್ವನ್ಮಣಿಗಳ ಸಾಲು ಸಹಾ ಇತಿಹಾಸದಷ್ಟು ದೀರ್ಘವಾದದ್ದೇ. ವಿದ್ವಾನ್‌ ಚಿಂತಲಪಲ್ಲಿ ವೆಂಕಟಾಚಲಯ್ಯ, ಚಿಂತಲಪಲ್ಲಿ ಶೇಷಗಿರಿರಾವ್‌, ಚಿಂತಲಪಲ್ಲಿ ವೆಂಕಟರಾಮಯ್ಯ, ಚಿಂತಲಪಲ್ಲಿ ಸುಬ್ಬರಾವ್‌, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ರಂಗರಾವ್‌… ಹೀಗೆ ಸಾಗುತ್ತ ಹೋದಂತೆ […]

Advertisement

Wordpress Social Share Plugin powered by Ultimatelysocial