ಮೀನುಗಾರರೋರ್ವರನ್ನು ತೂಗು ಹಾಕಿ ದೌರ್ಜನ್ಯ ಎಸಗಿದ ಘಟನೆ ಮಂಗಳೂರು ನಗರದ ಬಂದರ್ ದಕ್ಕೆಯಲ್ಲಿ‌‌ ಬೆಳಕಿಗೆ ಬಂದಿದೆ. ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರನೊಬ್ಬನನ್ನು ಇತರ ಮೀನುಗಾರ ಕಾರ್ಮಿಕರೇ ಕಾಲು ಕಟ್ಟಿ ತೂಗು ಹಾಕಿ‌ ಹಿಂಸಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ‌ ಮೂಲದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಮಂಗಳೂರು ನಗರದ ಪೊಲೀಸ್ ಕಮಿಷನರ್ ಶಶಿಕುಮಾರ್ […]

ರಿಮೋಟ್‌ ಕಂಟ್ರೋಲ್‌ನಂತೆ ಬಿಜೆಪಿಯನ್ನು ನಿಯಂತ್ರಿಸುವ ಗರ್ಭಗುಡಿಯ ಸಂಘಟನೆಗಳ ಒತ್ತಡದಿಂದ ರಾಜ್ಯ ಸರ್ಕಾರ ಮತಾಂತರ ನಿಷೇಧ ಮಸೂದೆ ಮಂಡಿಸಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಮಸೂದೆಯನ್ನು ಬಿಜೆಪಿ ಮೇಲೆ ಹಿಡಿತವುಳ್ಳ ಸಂಘಟನೆಗಳ ನಾಯಕರನ್ನು ಖುಷಿಪಡಿಸಲು ತರಲಾಗಿದೆ. ಇದರಲ್ಲಿ ಜನರ ಹಿತ ರಕ್ಷಿಸುವ ಉದ್ದೇಶವೂ ಇಲ್ಲ ಎಂದರು.ತರಾತುರಿಯಲ್ಲಿ ಏಕೆ ಮಂಡಿಸಿದ್ದಾರೆ? ಜನವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸಲು ಅವಕಾಶವಿತ್ತು. ಮತಾಂತರ ನಿಷೇಧ ಮಸೂದೆಯನ್ನು […]

ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆಗೆ ಮುಂದಾಗಿದೆ. ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡುತ್ತಿದ್ದು, ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಬೆಂಬಲ ನೀಡಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಮತಾಂತರ ನಿಷೇಧ ಕಾಯ್ದೆ ಮಂಡಿಸುತ್ತಿದ್ದೇವೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಜನರ ಹಿತದೃಷ್ಟಿಯಿಂದ ರಾಜ್ಯದಲ್ಲಿಯೂ ಈ ಕಾಯ್ದೆ ಜಾರಿಗೆ ಬರಲಿದೆ. […]

ಸಿದ್ಧ ಬಂಗಾಳಿ ಕವಿ ಮತ್ತು ಲೇಖಕ ಶರತ್‍ಕುಮಾರ್ ಮುಖರ್ಜಿ ಅವರು ಇಂದು ಮುಂಜಾನೆ ಹೃದಯ ಸ್ತಂಭನದಿಂದ ನಿಧನರಾದರು. ಇವರು ಸುನೀಲ್‍ಗಂಗೂಲಿ ಮತ್ತು ಶಕ್ತಿ ಚಟ್ಟೋಪಾಧ್ಯಾಯ ಅವರೊಂದಿಗೆ ಪ್ರಮುಖ ಸವ್ಯೋತ್ತರ ಕವಿಗಳ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.ಶರತ್ ಮುಖೋಪಾಧ್ಯಾಯ ಎಂದೂ ಹೆಸರಾಗಿದ್ದ ಮುಖರ್ಜಿ ತ್ರಿಶಂಕು ಕಾವ್ಯನಾಮದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದರು. ಟು ಗಾಡ್ ಮತ್ತು ಬಿರಜಾಮೋಹನ್ ನಂತಹ ಕವಿತೆಗಳಿಂದ ಖ್ಯಾತರಾಗಿದ್ದರು. ಆಗಸ್ಟ್ 15ರಂದು ಅವರು 90ನೇ ವರ್ಷಕ್ಕೆ ಕಾಲಿರಿಸಿದ್ದರು.ಮುಖರ್ಜಿ ಅವರು ಪುತ್ರ ಸಯಾನ್ ಮುಖರ್ಜಿ […]

ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ಧ್ವಂಸ ಮಾಡಿರುವ ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಯುವ ವೇದಿಯಿಂದ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಸಮಾವೇಶಗೊಂಡ ಕುರುಬ ಸಮಾಜದ ಮುಖಂಡರುಗಳು ರಾಜ್ಯಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ದೇಶ ಪ್ರೇಮಿ ಸಂಗೊಳ್ಳಿ ರಾಯಣ್ಣರವರ ಪ್ರತಿಮೆಯನ್ನು ದ್ವಂಸ ಗೊಳಿಸಿರುವ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಲಾಯಿತು.ಪ್ರತಿಭಟನೆಯಲ್ಲಿ ಸಂವಿಧಾನ ಶಿಲ್ಪಿ […]

ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಮಸೂದೆಗೆ ನಮ್ಮ ವಿರೋಧವಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ತಡೆ ವಿಧೇಯಕ ತರುವ ಮುನ್ನ ವಿದೇಶದಲ್ಲಿರುವ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಬೇಕು.ಇಂತಹ ಕಾಯ್ದೆಯನ್ನು ಜಾರಿಗೆ ತಂದರೆ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ನೆಮ್ಮದಿಯಾಗಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.ಈ ಕಾನೂನನ್ನು ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿಯವರು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ […]

ಚಳಿಗಾಲದ ಅಧಿವೇಶನದಲ್ಲಿಂದು ಪ್ರಸ್ತಾವಿತ ಮತಾಂತರ ನಿಷೇಧ ಮಸೂದೆ ಮಂಡನೆ ಮಂಡಿಸಲು ಬೊಮ್ಮಾಯಿ ಸರ್ಕಾರ ಮುಂದಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಲು ಅನುಮೋದನೆ ಪಡೆಯಲಾಗಿದೆ.ಈ ನಡುವೆ ವಿವಾದಿತ ವಿಧೇಯಕದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಕಾಯಿದೆಯಿಂದ ರಾಜ್ಯಕ್ಕೆ ಒಂದು ಕಪ್ಪುಚುಕ್ಕೆ ಎಂದಿದ್ದಾರೆ.ಮತಾಂತರ ಕಾಯ್ದೆ ನಿಷೇಧದ ಬಗ್ಗೆ ಇಂದು ವಿರೋಧ ಮಾಡುತ್ತಿರುವವರೇ ಅಂದು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು […]

ಶಿವಸೇನೆಯ ಕಾರ್ಯಕರ್ತರು ನಾವು ಉಳಿದುಕೊಂಡಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಜೀವವನ್ನೇ ತೆಗೆಯೋಕೆ ಮಾರಾಕಾಸ್ತ್ರಗಳಿಂದ ನುಗ್ಗಿದ್ದ ಪುಂಡರು, ಮರಾಠಿಯಲ್ಲೇ ಕ್ಷಮೆ ಕೇಳುವಂತೆ ಕೊರಳ ಪಟ್ಟಿ ಹಿಡಿದ್ರು.. ಕನ್ನಡಿಗರ ತಾಖತ್ತು, ಕನ್ನಡಿಗರ ಸ್ವಾಭಿಮಾನ ಕೆಣಕಿದ್ರೆ ನಾವು ಸುಮ್ನಿರ್ತಿವಾ..? ಹಲ್ಲೆ ಮಾಡಿದ್ರೂ ಕ್ಷಮೆ ಕೇಳಲಿಲ್ಲ ನಾವು.. ಮಹಾರಾಷ್ಟ್ರದಲ್ಲಿರುವ ಬಸವಣ್ಣರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸ್ಥಳೀಯ ಶಾಸಕರು ಹಾಗೂ ಕೇಂದ್ರ ಸಚಿವ ರಾಮದಾಸ್ ಅಟವಾಳೆರನ್ನ ಭೇಟಿ ಮಾಡಿ, ಬೆಳಗಾವಿ ಗಡಿ […]

ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳಿ ಗ್ರಾಮದಲ್ಲಿ ಇಂದು ಯುವಕರ ವತಿಯಿಂದ ಪ್ರತಿಭಟನೆ ನಡೆಸಿದರು…ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಹಾಗೂ ನಾಡು ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂಇಎಸ್ ಅವರನ್ನು ಬಂಧಿಸಬೇಕು ಎಂದು ಹೋರಾಟಗಾರರು ಹೇಳಿದರು ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದು ಹೇಳಿದರು..ನಾಡಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದಸ್ವ ಮಾಡಿದ್ದಾರೆ ಇವರನ್ನೆಲ್ಲ ಕ್ರಿಮಿನಲ್ ಕೇಸ್ ಮೇಲೆ ಬಂಧಿಸಬೇಕೆಂದು ಆಗ್ರಹಿಸಿದರು…ಪ್ರತಿಭಟನೆ ಪಾಲ್ಗೊಂಡ ಮುದುಕಪ್ಪ […]

ನಾಡು ನುಡಿಗೆ ಅಪಮಾನ ಮಾಡುವಂತದ್ದು ಯಾರಿಗೂ ಶೋಭೆ ತರುವಂತದ್ದು ಅಲ್ಲ ರಾಯಣ್ಣ ಪ್ರತಿಮೆಗೆ ವಿರೋಪ ಗೊಳಿಸಿರೋದು ಖಂಡನೀಯ ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ…ಜವಬ್ದಾರಿಯುತ ಸರ್ಕಾರಗಳು ಇಂತಹ ಘಟನೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.ಬಾವುಟ ಸುಟ್ಟು ಹಾಕಿದವರ ವಿರುದ್ದ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.ಪ್ರತಿಭಟನೆ ನೆಪದಲ್ಲಿ ಮಹಾನೀಯರ ಪ್ರತಿಮೆ ದಾಳಿ ಸಹಿಸಿಕೊಳ್ಳೋಕೆ ಆಗುವುದಿಲ್ಲ.ಶಾಂತಿ ಸುವ್ಯವಸ್ಥೆ ಕೆಡೆಸುವವರ ವಿರುದ್ಧ ಸರ್ಕಾರ ಗಂಭೀರವಾಗಿ ಪರಿಗಣಿಸಬಬೇಕು.ಪುಂಡಾಟಿಕೆ ಮಾಡಿವ್ರ ವಿರುದ್ದ ಕಠಿಣ ಕ್ರಮ […]

Advertisement

Wordpress Social Share Plugin powered by Ultimatelysocial