ತಲೆನೋವಿಗೆ ಕಾರಣಗಳು ಹಲವು

ತಲೆನೋವಿಗೆ ಕಾರಣಗಳು ಹಲವು

ತಲೆ‌ನೋವು ಅಥವಾ ಶಿರಶೂಲ‌. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಈ ನೋವನ್ನು ಅನುಭವಿಸಿಯೇ ಇರುತ್ತಾರೆ! ಅದು ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿಯೋ, ಇಲ್ಲ ಮತ್ತೊಂದು ರೋಗದ ಲಕ್ಷಣವಾಗಿಯಾದರೂ ಕಾಣಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಲೆನೋವಿನ‌ ಸಮಸ್ಯೆ ‍ಚಿಕ್ಕ‌ವಯಸ್ಸಿನಲ್ಲಿಯೇ ಹೆಚ್ಚು ಕಂಡುಬರುತ್ತಿರುವುದು ಆತಂಕದ ವಿಷಯ.

ಇದಕ್ಕೆ ಕಾರಣ ಇಂದಿನ ಜೀವನಶೈಲಿ‌!

ಈಗಿರುವ ಕೋವಿಡ್ ಕಾಲ ಘಟ್ಟದಲ್ಲಿ ನಮ್ಮ ಜೀವನಶೈಲಿಗಳೆಲ್ಲವೂ ಮೊದಲಿನಂತಿರದೆ ಬುಡ ಮೇಲಾಗಿದೆ! ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ಕ್ಲಾಸ್‌ – ಹೀಗೆ ಮನೆಯಿಂದ ಹೊರಗೆ ಹೋಗಲು ಕಾರಣಗಳೇ ಇಲ್ಲದೆ, ಆಹಾರ-ವಿಹಾರದಲ್ಲಿ ವಿಪರೀತ ವ್ಯತ್ಯಾಸ ಉಂಟಾಗಿದೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಯಾವುದಕ್ಕೂ ನಿರ್ದಿಷ್ಟ ಸಮಯವಿಲ್ಲದಿರುವುದು, ಸೇವಿಸುವ ಆಹಾರದಲ್ಲಿ, ದೇಹಕ್ಕೆ ವ್ಯಾಯಾಮ, ವಿಶ್ರಾಂತಿ ಯಾವುದಕ್ಕೂ ಶಿಸ್ತು ಎಂಬುದು ಇಲ್ಲವಾಗಿರುವುದು. ಮೊಬೈಲ್-ಕಂಪ್ಯೂಟರ್‌ಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿ ಕೋಪ, ಭಯ, ದುಃಖ – ಹೀಗೆ ದೈಹಿಕ ಮಾನಸಿಕ ಆರೋಗ್ಯವೆಂಬುದು ಗಣನೀಯವಾಗಿ ಕ್ಷೀಣಿಸಿದೆ. ಅದರಲ್ಲೂ ತಲೆನೋವೆಂದು ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚು.

ಕಾರಣಗಳು

ಅತಿಯಾದ ಖಾರ, ಹುಳಿ, ರೂಕ್ಷ, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದು; ಕೃತಕ ಆಹಾರ ಸಂರಕ್ಷಕಗಳನ್ನು ಬಳಸಿ ತಯಾರಿಸಿದ ದೂಷಿತ ಆಹಾರ ಸೇವನೆ, ಪ್ರತಿದಿನವೂ ಒಂದು ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವಿಸದಿರುವುದು, ಹಸಿವಾಗದೆ ಆಹಾರ ಸೇವಿಸುವುದು, ಮೇಲಿಂದ ಮೇಲೆ ಏನಾದರೂ ತಿನ್ನುತ್ತಲೇ ಇರುವುದು. ಅಜೀರ್ಣವಾದ ಆಹಾರ, ಉಪವಾಸ. ಜೀರ್ಣಾಂಗದಲ್ಲಿ ಕ್ರಿಮಿಗಳ ತೊಂದರೆ ಉಂಟಾದಾಗ, ಅತಿಯಾದ ಮದ್ಯಪಾನ, ದೇಹಕ್ಕೆ ಅಗತ್ಯವಿಲ್ಲದಿದ್ದರೂ ಅತಿಯಾದ ನೀರಿನ ಸೇವನೆ. ಅತಿಯಾದ ಕಾಫೀ-ಟೀ ಸೇವನೆಯನ್ನು ಹಠಾತ್ ಆಗಿ ನಿಲ್ಲಿಸುವುದು.

ಮಲ, ಸೀನು, ಕಣ್ಣೀರನ್ನು ತಡೆಯುವುದು, ಪ್ರತಿದಿನವೂ ದೂಳು, ಹೊಗೆಯ ಸೇವನೆ, ತೀಕ್ಷ್ಣವಾದ ಬಿಸಿಲಿನಲ್ಲಿ ತಿರುಗಾಡುವುದು, ಕಣ್ಣುಗಳಿಗೆ ತೊಂದರೆ ಆಗುವಷ್ಟು ಬೆಳಕಿರುವ ವಸ್ತುಗಳನ್ನು ತುಂಬಾ ಸಮಯ ದಿಟ್ಟಿಸಿ ನೋಡುವುದು (ಮೊಬೈಲ್, ಕಂಪ್ಯೂಟರ್, ಟಿ.ವಿ.), ಗಾಢವಾದ ವಾಸನೆಯುಳ್ಳ ವಸ್ತುಗಳನ್ನು ಆಘ್ರಾಣಿಸುವುದರಿಂದ (ಪರ್ಫ್ಯುಮ್), ಕಿವಿಗಡಚಿಕ್ಕುವ ಶಬ್ದವನ್ನು ಆಲಿಸುವುದು.

ಎತ್ತರದ ದಿಂಬಿನ ಮೇಲೆ ತಲೆ ಇಟ್ಟು ಮಲಗುವುದು, ವಿಪರೀತ ಮಾತನಾಡುವುದರಿಂದ, ಅತಿಯಾದ ಶೀತಗಾಳಿಯ ಸೇವನೆ.

ಹಗಲಿನಲ್ಲಿ ನಿದ್ರೆ ಮಾಡುವುದು, ರಾತ್ರಿ ಜಾಗರಣೆ ಮಾಡುವುದು ಇಲ್ಲವೇ ಬೆಳಗಿನ ಜಾವದವರೆಗೂ ಮಲಗದಿರುವುದು.

ಅತಿಯಾದ ಯೋಚನೆ, ಭಯ, ಕೋಪ, ಉದ್ವೇಗಗೊಳ್ಳುವುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆಗೆ ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಬೆಂಬಲ ನೀಡಿ :ಮಾಜಿ ಸಿಎಂ ಯಡಿಯೂರಪ್ಪ 

Tue Dec 21 , 2021
ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಮಸೂದೆ ಮಂಡನೆಗೆ ಮುಂದಾಗಿದೆ. ಮತಾಂತರ ನಿಷೇಧ ವಿಧೇಯಕ ಮಂಡನೆ ಮಾಡುತ್ತಿದ್ದು, ಎಲ್ಲಾ ಪಕ್ಷಗಳು ಸರ್ವಾನುಮತದಿಂದ ಬೆಂಬಲ ನೀಡಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಮತಾಂತರ ನಿಷೇಧ ಕಾಯ್ದೆ ಮಂಡಿಸುತ್ತಿದ್ದೇವೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ಜನರ ಹಿತದೃಷ್ಟಿಯಿಂದ ರಾಜ್ಯದಲ್ಲಿಯೂ ಈ ಕಾಯ್ದೆ ಜಾರಿಗೆ ಬರಲಿದೆ. […]

Advertisement

Wordpress Social Share Plugin powered by Ultimatelysocial