ಜೀವನದಲ್ಲಿ ಒಮ್ಮೆಯಾದರೂ ನೀವು ಪಾರ್ಲೆ ಜಿ ಬಿಸ್ಕತ್ತನ್ನು ತಿಂದೇ ಇರ್ತೀರಾ..! ಆದರೆ ಈ ಬಿಸ್ಕತ್ತಿಗೆ ಪಾರ್ಲೆ ಜಿ ಎಂಬ ಹೆಸರು ಹೇಗೆ ಬಂತು ಅಂತಾ ಎಂದಾದರೂ ಯೋಚನೆ ಮಾಡಿದ್ದೀರಾ..?‌ ಈ ಬಿಸ್ಕತ್ತು ತಯಾರಿಕೆಯ ಕಾರ್ಯವನ್ನು ಮುಂಬೈನ ವಿಲೇ ಪಾರ್ಲೆಯಲ್ಲಿ ಆರಂಭಿಸಲಾಯ್ತು. ಇದೇ ಕಾರಣಕ್ಕೆ ಪಾರ್ಲೆ ಎಂಬ ಪದವನ್ನು ಬಳಕೆ ಮಾಡಲಾಯ್ತು. ಆದರೆ ಪಾರ್ಲೆ ಜಿ ಯಲ್ಲಿರುವ ‘ಜಿ’ ಅಂದರೆ ಏನು..? ಆ ಪ್ಯಾಕೆಟ್​ನಲ್ಲಿರುವ ಮಗು ಯಾರು..? ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿಯೇ […]

  ಕರ್ನಾಟಕ ಧ್ವಜ ಸುಟ್ಟು, ಮಹಾನಾಯಕರ ಮೂರ್ತಿಗಳಿಗೆ ಅಪಮಾನ ಮಾಡಿ, ದರ್ಪಾ ಮೆರೆದಿರುವ ಎಂ.ಇ.ಎಸ್‌ ಪುಂಡರನ್ನ ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಇಂದು ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದ ಬಳಿ ನಾರಾಯಣ ಗೌಡ ಅವರ ನೇತೃದಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶ ಪಡೆದಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಕನ್ನಡಪರ ಸಂಘಟನೆಗಳಿಂದಲೇ ಅಪಸ್ವರ ವ್ಯಕ್ತವಾಗಿದ್ದು, ಬಂದ್ ರ್ಯಾಲಿಗೆ ಸೀಮಿತವಾಗುವ ಲಕ್ಷಣಗಳು ಗೋಚರಿಸಿವೆ. ಕರ್ನಾಟಕ ರಕ್ಷಣ ವೇದಿಕೆಯ ಟಿ.ಎ.ನಾರಾಯಣಗೌಡ, ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಹೋಟೆಲ್ ಉದ್ಯಮ, ಕ್ಯಾಬ್ ಚಾಲಕರು ಸೇರಿ ಹಲವು ಸಂಘ-ಸಂಸ್ಥೆಗಳು ಕರ್ನಾಟಕ ಬಂದ್​ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ […]

ಹಿರಿಯ ನಟ ನಾಸಿರುದ್ದೀನ್ ಶಾ ಅವರು ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಮೊಘಲರು ನಿರಾಶ್ರಿತರು ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮೊಘಲರ ಕ್ರೌರ್ಯವೆನ್ನಲಾದ ದುಷ್ಕೃತ್ಯಗಳು ನಿತ್ಯವೂ ಬೆಳಕಿಗೆ ಬರುತ್ತಿದ್ದು, ಮೊಘಲರು ದೇಶಕ್ಕೆ ಕೊಡುಗೆ ನೀಡಿದವರು ಎಂಬುದನ್ನು ನಾವು ಮರೆಯುತ್ತೇವೆ ಎಂದು ಅವರು ಹೇಳುವುದನ್ನು ಕೇಳಬಹುದಾಗಿದೆ. ಸಂದರ್ಶನದ ವೇಳೆಯಲ್ಲಿ, ಮೊಘಲರು ನಿರಾಶ್ರಿತರಾಗಿದ್ದರು ಎಂದು ನಾಸಿರುದ್ದೀನ್ ಶಾ ಹೇಳುತ್ತಾರೆ. ಮುಂದುವರೆದು ಮಾತನಾಡಿದ ಅವರು, ನೃತ್ಯ, […]

ಶ್ರೀನಗರ: ಜಮ್ಮು ಮತ್ತುಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಅದರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಲ್ಲಾ ಆರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ. ‘ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ನಾಲ್ವರ ಗುರುತು ಪತ್ತೆಮಾಡಲಾಗಿದ್ದು, ಇನ್ನಿಬ್ಬರು ಭಯೋತ್ಪಾದಕರ ಗುರುತು ಪತ್ತೆ ಮಾಡಲಾಗುತ್ತಿದೆ. ಇದು ನಮಗೆ ಸಿಕ್ಕ ದೊಡ್ಡ […]

ಚಾಮರಾಜನಗರ: ಈ ಹಿಂದೆಯೂ ಈ ವಾರ್ಡ್ ನಲ್ಲಿ ಎಸ್ ಡಿಪಿಐ ಗೆಲುವು ಸಾಧಿಸಿತ್ತು. ಸದಸ್ಯರಾಗಿದ್ದ ಸಮೀವುಲ್ಲಾ ಅವರ ಅಕಾಲಿಕ ನಿಧನದಿಂದಾಗಿ ಉಪಚುನಾವಣೆ ನಡೆದಿತ್ತು. ಎಸ್ ಡಿಪಿಐ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಎಸ್ ಡಿಪಿಐ ನಿಂದ ಅಫ್ಸರ್ ಪಾಷ, ಕಾಂಗ್ರೆಸ್ ನಿಂದ ಸೈಯದ್ ಅತೀಕ್ ಅಹಮದ್, ಜೆಡಿಎಸ್ ನಿಂದ ಮೊಹಮ್ಮದ್ ಜಾವೀದ್ ಹಾಗೂ ಬಿಜೆಪಿಯಿಂದ ಪಿ.ಮಹೇಶ್ ಸ್ಪರ್ಧಿಸಿದ್ದರು. 1,801 ಮತದಾರರ ಪೈಕಿ, 1,209 ಮಂದಿ ಮತದಾನ ಮಾಡಿದ್ದರು. ಅಫ್ಸರ್ […]

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಹಿರಿಯ ಸದಸ್ಯ ರಾಸ್ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ಬೇಸಿಗೆಯಲ್ಲಿ ತವರು ನೆಲದಲ್ಲಿ ನಡೆಯಲಿರುವ ಮೂರು ಸರಣಿಗಳ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುವುದಾಗಿ ಟೇಲರ್ ಹೇಳಿದ್ದಾರೆ. ಶನಿವಾರದಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದೇ ತನ್ನ ಅಂತಿಮ ಟೆಸ್ಟ್ ಸರಣಿಯಾಗಲಿದೆ ಎಂದು ರಾಸ್ ಹೇಳಿದ್ದಾರೆ. ನಂತರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ […]

  ರಾಮಚಂದ್ರಾಪುರ ಮಠದ ರಾಘವೇಶ್ರೀ ಸ್ವಾಮೀಜಿ ವಿರುದ್ದ ದ ಅತ್ಯಾಚಾರ ಪ್ರಕರಣದಲ್ಲಿನ ಅದೀನ ನ್ಯಾಯಾಲಯ ನಿಡೀದ್ದ ತೀರ್ಪನ್ನು ಹೈಕೋರ್ಟ ಎತ್ತಿ ಹಿಡಿಯುವ ಮೂಲಕ ಸಂತ್ರಸ್ತೆ ಗಾಯಕಿಯ ಮತ್ತು ರಾಜ್ಯ ಸರ್ಕಾರ (ಸಿಐಡಿ ತನಿಕಾಧಿಕಾರಿಗಳು )ಸಲ್ಲಿಸಿದ್ದ ಕ್ರೀಮಿನಲ್‌ ಮರುಪರಿಶಿಲನಾ ಅರ್ಜಿಯ ತಿರ್ಪನ್ನು ಪ್ರಕಟಿಸಿದೆ.ತಿರ್ಪಿನಲ್ಲಿ ಅದೀನ ನ್ಯಾಯಾಲಯದ ಆದೇಶ ಸೂಕ್ತ ವಾಗಿದೆ ಇದರಲ್ಲಿ ಮದ್ಯಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಆಡಳಿತ ಪಕ್ಷ ಬಿಜೆಪಿಗೆ ಹಿನ್ನಡೆ ಉಂಟಾದರೆ, ಪ್ರತಿಪಕ್ಷ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜೆಡಿಎಸ್ ಪಾತಳಕ್ಕೆ ಕುಸಿದಿದೆ. ಗುರುವಾರ ನಡೆದ ಫಲಿತಾಂಶದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿಸಿಕೊಂಡರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಶಿಧರ ಜೊಲ್ಲೆ ಮತ್ತು ಶ್ರೀರಾಮುಲು ಮುಂತಾದ ಬಿಜೆಪಿ ನಾಯಕರಿಗೆ ತವರಿನಲ್ಲಿ ಸೋಲುಂಟಾಗಿದೆ. ಪಟ್ಟಣ ಪಂಚಾಯಿತಿಯ 577 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಗೆಲುವು […]

ಇಂದು ಬೆಳಗ್ಗೆ ೮ ಗಂಟೆಯಿಂದಲೇ, ಪುರಸಭೆ ಮತ್ತು ಗ್ರಾಮ ಪಂಚಾಯಿತಿಯ ಫಲಿತಾಂಶ ಶುರುವಾಗಿದೆ. ಹೀಗಾಗಿ ಇಂದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಕಣ್ಣು ಇಂದು ಫಲಿತಾಂಶದ ಮೇಲೆ ಇತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್‌  ಅವರ ತವರು ಕ್ಷೇತ್ರದ ಫಲಿತಾಂಶ ಬೊಮ್ಮಾಯಿ ಅವರಿಗೆ ಬೇಸರ ಉಂಟು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿ ತಾಲೂಕಿಗೆ ಒಳಪಡುವ ಬಂಕಾಪುರದಲ್ಲಿ ಇಂದು ಮತದಾರರು ಬಿಜೆಪಿನಾ […]

Advertisement

Wordpress Social Share Plugin powered by Ultimatelysocial