ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ‘ಸರೋಜಿನಿ ಮಹಿಷಿ ವರದಿ’ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ ಹೋರಾಟ ನಡೆಯುತ್ತಲೇ ಇದೆ. ಡಾ. ಸರೋಜಿನಿ ಮಹಿಷಿ ಅವರು ಪ್ರಸಿದ್ಧ ಕಾನೂನು ತಜ್ಞೆ, ರಾಜಕಾರಿಣಿ, ಸಾಹಿತಿ, ಚಿತ್ರಕಲಾವಿದೆ, ಬಹುಭಾಷಾ ಜ್ಞಾನಿ.ಸರೋಜಿನಿ ಮಹಿಷಿ 1927ರ ಮಾರ್ಚ್ 3 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ವಕೀಲರು ಹಾಗೂ ಸಂಸ್ಕೃತ ಪಂಡಿತರಾಗಿದ್ದ ಬಿಂದೂರಾವ್ ಅಚ್ಯುತಾಚಾರ್ಯ ಮಹಿಷಿ. ತಾಯಿ ಕಮಲಾಬಾಯಿ.ಸರೋಜಿನಿ […]

    ಭವಾನಿ ಲೋಕೇಶ್ ಉತ್ಸಾಹಿ ಕನ್ನಡ ಕಾರ್ಯಕರ್ತೆ ಮಾಧುರ್ಯಯುತ ಕನ್ನಡದ ಧ್ವನಿಯ ನಿರೂಪಕಿಯಾಗಿ, ಬರಹಗಾರ್ತಿಯಾಗಿ, ಕವಯತ್ರಿಯಾಗಿ, ಸ್ರೀ ಶಕ್ತಿ ಒಕ್ಕೂಟದ ಸಂಘಟಕರಾಗಿ, ಫೇಸ್ಬುಕ್ ಕಗ್ಗ ಬಳಗದ ಸ್ಥಾಪಕರಾಗಿ ಹೀಗೆ ಹಲವು ರೀತಿಯಲ್ಲಿ ಅವರು ಸಕ್ರಿಯರು.ಭವಾನಿ ಲೋಕೇಶ್ ಅವರ ಜನ್ಮದಿನ ಮಾರ್ಚ್ 3. ಅವರು ಮಂಡ್ಯ ಜಿಲ್ಲೆಯ ಕೆರೆಗೂಡಿನಲ್ಲಿ ಜನಿಸಿದರು. ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಬಿ.ಎಸ್‍ಸಿ ಪದವಿ ಪಡೆದ ಭವಾನಿ ಮುಂದೆ, ಕನ್ನಡ ಎಂ.ಎ., ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಯುಜಿಸಿ […]

    ಜಸ್ಪಾಲ್ ಭಟ್ಟಿನಾನು ಕಿರುತೆರೆ ಕಾರ್ಯಕ್ರಮಗಳನ್ನು ಇಷ್ಟಪಟ್ಟು ನೋಡುತ್ತಿದ್ದ ದಿನಗಳಲ್ಲಿ ಜನಪ್ರಿಯರಾಗಿದ್ದ ನನ್ನ ಮೆಚ್ಚಿನ ಕಲಾವಿದರಲ್ಲಿ ಜಸ್ಪಾಲ್ ಭಟ್ಟಿ ಒಬ್ಬರು.ಜಸ್ಪಾಲ್ ಭಟ್ಟಿ ಅವರು ಜನಿಸಿದ ದಿನ ಮಾರ್ಚ್ 3, 1955. ಅವರು ಶುದ್ಧ ಹಾಸ್ಯದ ಮೂಲಕ ಜನಸಾಮಾನ್ಯರ ನೋವುನಲಿವುಗಳನ್ನು ವ್ಯಕ್ತಪಡಿಸಿದ ಪ್ರತಿಭಾವಂತ ಕಲಾವಿದ.‘ಫ್ಲಾಪ್ ಶೋ’ ಹಾಗೂ ‘ಉಲ್ಟಾ ಪಲ್ಟಾ’ ಮುಂತಾದ ದೂರದರ್ಶನ ಸರಣಿ ಕಾರ್ಯಕ್ರಮಗಳ ಮೂಲಕ ಇಡೀ ದೇಶವನ್ನೇ ನಗೆ ಅಲೆಯಲ್ಲಿ ತೇಲಿಸಿದ ಜಸ್ಪಾಲ್ ಭಟ್ಟಿ ಅವರಲ್ಲಿ ಹಾಸ್ಯ […]

  ಡಾ. ಕೆ. ರಘುನಾಥ್ ಮತ್ತು ಡಾ. ಗಿರಿಜಾ ಶಾಸ್ತ್ರಿ ದಂಪತಿಗಳು ಮುಂಬೈ ನೆಲದಲ್ಲಿ ಅಪಾರವಾದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ.ಮಾರ್ಚ್ 3 ರಘುನಾಥ್ ಕೃಷ್ಣಮಾಚಾರ್ ಅವರ ಜನ್ಮದಿನ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಮುಂಬೈ ವಿ.ವಿ.ಯಿಂದ ಎಂಫಿಲ್ ಮತ್ತು ಪಿಎಚ್.ಡಿ ಪದವಿ ಪಡೆದರು. ಅರವಿಂದ ನಾಡಕರ್ಣಿ ಅವರ ಕಾವ್ಯ – ಒಂದು ಅಧ್ಯಯನ’ ಅವರ ಎಂಫಿಲ್ ಪ್ರಬಂಧ. ‘ಕನ್ನಡ ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ’ […]

  ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇಹಲೋಕ ತ್ಯಜಿಸಿದ ತೋರು ದತ್ತ ಅವಿಸ್ಮರಣೀಯವೆನಿಸುವ ಕೃತಿಗಳನ್ನು ರಚಿಸಿ ಇಂಗ್ಲೀಷ್ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಒತ್ತಿದ್ದಾಳೆ.ರಾಮ ಬಾಗನ್ ದತ್ತ ಕುಟುಂಬದಲ್ಲಿ 1856ರ ಮಾರ್ಚ್ 4ರಂದು ಜನಿಸಿದ ತೋರು ದತ್ತರ ತಂದೆ ಗೋವಿನ್ ಚಂದರ ದತ್ತ. ತೋರುವಿನ ಸಹೋದರ […]

  ಆರ್.ಎಸ್‌. ಕೇಶವಮೂರ್ತಿಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ, ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. ಗುರುಗಳನ್ನು ಶ್ವೇತಛತ್ರವೆಂದೇ ಭಾವಿಸಿದ್ದ ಕೇಶವಮೂರ್ತಿಗಳು “ಸಾಧನೆಯಿಂದ ಸಿದ್ಧಿ; ಸಿದ್ಧಿಯಿಂದ ಪ್ರಸಿದ್ಧಿ; ಅಸಾಧ್ಯ ಎನ್ನುವುದು ಸಲ್ಲ; ಪ್ರತಿಯೊಬ್ಬರೂ ಅಸಾಧ್ಯ ಸಾಧಕರಾದರೆ ‘ಅಸಾಧ್ಯಂ ತವ ಕಿಂವದ?” ಎಂದು ಪದೇ ಪದೇ ಹೇಳುತ್ತಿದ್ದರು.1903ರ ಮಾರ್ಚ್ 4ರಂದು ಬೇಲೂರಿನಲ್ಲಿ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ […]

  ತಾರಾ ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ […]

    ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ. ರೋಹನ್ ಬೋಪಣ್ಣ ಹುಟ್ಟಿದ್ದು 1980ರ ಮಾರ್ಚ್ 4ರಂದು. ನಮ್ಮ ಬೋಪಣ್ಣ ಪಾಕಿಸ್ಥಾನದ ಆತನ ಗೆಳೆಯ ಆಯಿಸಂ ಉಲ್ ಹಕ್ ಖುರೇಷಿ ಜೊತೆಗೂಡಿ ವಿಶ್ವ ಟೆನ್ನಿಸ್ ಡಬಲ್ಸ್ ಕ್ರೀಡೆಯಲ್ಲಿ ಪ್ರತಿಷ್ಟಿತ ಸಾಧನೆ ಮಾಡಿದವರು. ಈ ಮೂಲಕ ಈ ಭಾರತ ಪಾಕ್ ಅಪೂರ್ವ ಜೋಡಿ ‘ಇಂಡೋ ಪಾಕ್ ಎಕ್ಸ್ ಪ್ರೆಸ್’ […]

  ಶೇನ್ ವಾರ್ನ್ ವಿಶ್ವ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರು. ಕಳೆದ ವರ್ಷ ಅವರು ದಿಢೀರನೆ ನಿಧನರಾದರು ಎಂದು ಓದಿದ ಸುದ್ದಿ ನಾವು ಊಹಿಸದೆ ಇದ್ದಂತದ್ದು.ಇನ್ನೂ 53ರ ಅಂಚಿನಲ್ಲಿದ್ದ ಶೇನ್ ವಾರ್ನ್ ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಮತ್ತು 3154 ರನ್ ಗಳಿಸಿ, 194 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಮತ್ತು 1018 ರನ್ ಗಳಿಸಿ ಸುದೀರ್ಘ ಕಾಲ ಕ್ರಿಕೆಟ್ ಲೋಕದಲ್ಲಿ ಅಸಾಮಾನ್ಯ ಪ್ರತಿಭೆ […]

  ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸುವುದು ಅತ್ಯಂತ ಕಷ್ಟದ ಕೆಲಸ. ತುಂಟ ಹುಡುಗರ ಶಾಲಾ ಕೊಟಡಿಯಲ್ಲಿ ಹೆಚ್ಚೆಂದರೆ 60-70 ವಿದ್ಯಾರ್ಥಿಗಳನ್ನು ಶಿಸ್ತು , ಸಂಯಮ, ಉತ್ತಮ ಅಧ್ಯಾಪನ ಶಕ್ತಿ ಉಳ್ಳಂತಹ ಉಪಾಧ್ಯಾಯರುಗಳು ಮಾತ್ರವೇ ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಇನ್ನು ಲೋಕಸಭೆಯ ಗದ್ದಲವನ್ನು ನೋಡಿದರೆ ಯಮಧರ್ಮನಿಗೂ ಕೆಲವು ಸಲ ನಿಭಾಯಿಸಲು ಕಷ್ಟವೇನೋ ಅನಿಸುತ್ತೆ. ದೂರದರ್ಶನದಲ್ಲಿ ಲೋಕಸಭೆಯ ಕಾರ್ಯಕಲಾಪಗಳು ಕಾಣತೊಡಗಿದ ನಂತರದಲ್ಲಿ, ಹೀಗೆ ಅತ್ಯಂತ ತಾಳ್ಮೆ, ನಸು ನಗೆ ಮತ್ತು ಚಾಕಚಕ್ಯತೆಗಳಿಂದ ಲೋಕಸಭೆಯನ್ನು ನಿರ್ವಹಿಸಿದವರಾಗಿ […]

Advertisement

Wordpress Social Share Plugin powered by Ultimatelysocial