ಕೋಬ್ರಾ ಹಾವಿನಿಂದ ಕಚ್ಚಿಸಿ 25 ವರ್ಷದ ಪತ್ನಿಯನ್ನ ಕೊಂದ ಪತಿಗೆ ಕೇರಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಪತ್ನಿ ಉತ್ತರಾಳ ಮಲಗಿದ್ದಾಗ ಕೋಬ್ರಾ ಹಾವಿನಿಂದ ಕಚ್ಚಿಸಿ ಕೊಂದ ಆರೋಪದಲ್ಲಿ ಪತಿ ಸೂರಜ್ ಕುಮಾರ್ ನನ್ನ ಅಕ್ಟೋಬರ್ 11ರಂದು ಬಂಧಿಸಲಾಗಿತ್ತು. ಪತ್ನಿಯನ್ನ ಕೊಲ್ಲಲು ಮೊದಲ ಬಾರಿ ಹಾವೊಂದನ್ನ ಬಳಸಿ ವಿಫಲವಾಗಿದ್ದು, ನಂತರ ಕೋಬ್ರಾದಿಂದ ಕಚ್ಚಿಸಿ ಹತ್ಯೆಗೈದಿದ್ದ.ಪ್ರಕರಣ ಅಪರೂಪದಲ್ಲೇ ಅಪರೂಪ ಎಂದು ವಿಶ್ಲೇಷಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಐ. […]

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾಗಿದ್ದು, ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ. ನಾಳೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಡಾ. ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಯ ಪಕ್ಕದಲ್ಲಿ ಭಾನುವಾರ ನಟ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗುವುದು. ವಿದೇಶದಿಂದ ಮಗಳು ದೃತಿ ಬಂದ ಬಳಿಕ ನಾಳೆ ಅಂತ್ಯಕ್ರಿಯೆ ನೆರವೇರಲಿದೆ. ಕುಟುಂಬದವರು ಮತ್ತು ಸರ್ಕಾರದ […]

ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಹಾಗೂ ಭಾವನಾ ಮೆನನ್ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಚಿತ್ರ ಇಂದು 1 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗಿದ್ದು, ಮುಂಜಾನೆ 5 ಗಂಟೆಯಿಂದಲೇ ಫ್ಯಾನ್ ಶೋ ಆರಂಭವಾಗಿದೆ. ಚಿತ್ರ ಮಂದಿರಗಳು ಹೌಸ್ ಫುಲ್ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೊಡ್ಮನೆ ಅಭಿಮಾನಿಗಳ ಅದ್ದೂರಿಯಿಂದ ಭಜರಂಗಿ-2 ಸಿನಿಮಾವನ್ನು ಬರಮಾಡಿಕೊಂಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಗೌಡನಪಾಳ್ಯದ ಶ್ರೀನಿವಾಸ ಹಾಗೂ ಜೆಪಿ ನಗರದ ಸಿದ್ದೇಶ್ವರ ಚಿತ್ರ ಮಂದಿರದಲ್ಲಿ ಶೋ ಆರಂಭವಾಗಿದ್ದು, ಶಿವರಾಜ್ […]

ಸತತ 2 ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಕ್ರಮವಾಗಿ 35 ಪೈಸೆ ಹೆಚ್ಚಳವಾಗಿದೆ.  ಇನ್ನು ಪೆಟ್ರೋಲ್ ಬೆಲೆಯೊಂದೇ ಅಲ್ಲ ಲೀಟರ್ ಡೀಸೆಲ್ ದರದವೂ ಸಹ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಇಂಧನ ದರ ಗರಿಷ್ಠ ಮಟ್ಟ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ Rs 111.70, ಡೀಸೆಲ್ Rs 102.60 ಆಗಿದೆ. […]

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದ ಟ್ಯಾಕ್ಸಿ ನಿಲ್ದಾಣದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಆರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಿಪೋರಾದ ಟ್ಯಾಕ್ಸಿ ಸ್ಟಾಂಡ್‌ನಲ್ಲಿ ನಿಂತಿದ್ದ ಟಾಟಾ ಸುಮೋ ಸ್ಫೋಟಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ರಭಸಕ್ಕೆ ಟಾಟಾ ಸುಮೋ ಅಕ್ಕಪಕ್ಕ ಇದ್ದ ವಾಹನಗಳು ಜಖಂಗೊಂಡಿದ್ದು, ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ.   ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ : https://play.google.com/store/apps/details?id=com.speed.newskannada    

ರಾಜ್ಯದ ಹುಬ್ಬಳ್ಳಿ ಸೇರಿದಂತೆ ದೇಶದ 13 ವಿಮಾನ ನಿಲ್ದಾಣಗಳನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಹಣಗಳಿಕೆ ಯೋಜನೆಯಡಿ ದೇಶದ ಏಳು ಸಣ್ಣ ಹಾಗೂ ಆರು ದೊಡ್ಡ ವಿಮಾನ ನಿಲ್ದಾಣಗಳನ್ನು 50 ವರ್ಷಕ್ಕೆ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಕೇಂದ್ರ ಸರ್ಕಾರದ ವಿಮಾನಯಾನ ಸಚಿವಲಾಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ನಾಲ್ಕು ವರ್ಷದಲ್ಲಿ 25 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ–ಖಾಸಗಿ ಪಾಲುದಾರಿಕೆಯಡಿ […]

ನಗರದಲ್ಲಿ ನಮ್ಮ ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. 40 ಅಡಿ ಎತ್ತರದಿಂದ ಕ್ರೇನ್ ಕುಸಿದು ಬಿದ್ದಿದ್ದು, ಭಾರೀ ಅನಾಹುತ ತಪ್ಪಿದೆ.ಸಿಲ್ಕ್ ಬೋರ್ಡ್ ಬಳಿ ಮೆಟ್ರೋ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಕೆಲಸ ಮಾಡುವಾಗಲೇ ಕ್ರೇನ್ ಕುಸಿದಿದೆ. ಭಾನುವಾರ ಆಗಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಆದ್ದರಿಂದ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ. ಮೆಟ್ರೋ ಸೆಗ್ಮೆಂಟ್ ಜೋಡಣೆ ಮಾಡುತ್ತಿದ್ದ ಕ್ರೇನ್ ಅರ್ಧಕ್ಕೆ ತುಂಡಾಗಿದ್ದು ಸುಮಾರು 40 ಅಡಿ ಎತ್ತರಿಂದ ಕೇನ್ […]

ನವದೆಹಲಿ: ಸಾಮಾಜಿಕ ಜಾಲತಾಣದ ದಿಗ್ಗಜ ಕಂಪನಿ ಫೇಸ್​ಬುಕ್ ತನ್ನ ಹೆಸರನ್ನು ಬದಲಾವಣೆ ಮಾಡಲು ಬಯಸಿದ್ದು, ಮುಂದಿನ ವಾರ ಅದಕ್ಕೆ ಮರುನಾಮಕರಣ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.  ಫೇಸ್​ಬುಕ್​ನ ಸಿಇಒ ಮಾರ್ಕ್ ಜುಕರ್​ಬರ್ಗ್ ಕಂಪನಿಯ ಹೆಸರು ಬದಲಾವಣೆ ಮಾಡುವ ಕುರಿತು ಅಕ್ಟೋಬರ್ 28ರಂದು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಆದರೆ, ಹೊಸ ಹೆಸರು ಯಾವುದು ಎಂಬ ಸುಳಿವು ನೀಡಿಲ್ಲ. ಫೇಸ್​ಬುಕ್​ನ ವ್ಯವಹಾರ ಕುರಿತು ಅಮೆರಿಕದ ಆಡಳಿತ ಪರಿಶೀಲನೆ, ತಪಾಸಣೆಯನ್ನು […]

​ಜನರ ಆಸಕ್ತಿಗೆ ತಕ್ಕಂತೆ ಸ್ಮಾರ್ಟ್​ಫೋನ್ ಕಂಪನಿಗಳು ಹಲವು ವಿಶೇಷತೆಗಳನ್ನು ಒಳಗೊಂಡ ಮತ್ತು ಒಂದಕ್ಕಿಂತ ಒಂದು ವಿಭಿನ್ನವಾದ ಸ್ಮಾರ್ಟ್​ಫೋನ್​​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತವೆ. ಅದರಲ್ಲೂ ಸ್ಯಾಮ್​ಸಂಗ್​ , ಗೂಗಲ್​, ಮೊಟೊರೊಲಾ ಮುಂತಾದ ಬ್ರ್ಯಾಂಡ್​ಗಳು ನೂತನ ಫೋನ್​ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿರುತ್ತದೆ. ಅದರಂತೆ ಈಗಾಗಲೇ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ವಾರ ಮಾರುಕಟ್ಟೆಗೆ ಬರಲಿರುವ ಮುತ್ತು ಜನವರಿ ತಿಂಗಳಲ್ಲಿ ಖರೀದಿಗೆ ಸಿಗುವ ಸ್ಮಾರ್ಟ್​ಫೋನ್​ ಬಗ್ಗೆ ಮಾಹಿತಿ ಇಲ್ಲಿದೆ. ಮೊಟೊರೊಲಾ ಎಡ್ಜ್​​ ಎಸ್​ (Motorola Edge S) […]

ಬೀಜಿಂಗ್‌: ಬಾಹ್ಯಾಕಾಶ ನೌಕೆ ‘ಶೆನ್‌ಶಾವ್‌-13’ನ ಯಶಸ್ವಿ ಉಡಾವಣೆಯ ಗಂಟೆಗಳ ನಂತರ ಮಹಿಳೆ ಸೇರಿ ಮೂವರು ಗಗನಯಾತ್ರಿಗಳು ಶನಿವಾರ ಬಾಹ್ಯಾಕಾಶ ನಿಲ್ದಾಣ ‘ಟಿಯಾನ್ಹೆ’ ಪ್ರವೇಶಿಸಿದ್ದಾರೆ ಎಂದು ಚೀನಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.astroಗಳಾದ ಝೈ ಜಿಗಾಂಗ್‌, ವಾಂಗ್‌ ಯಾಪಿಂಗ್‌ ಮತ್ತು ಯೆ ಗುವಾಂಗ್ಫು ಅವರು ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ನಿಲ್ದಾಣದ ರೇಡಿಯಲ್‌ ಪೋರ್ಟಲ್‌ ಅನ್ನು ಯಶಸ್ವಿಯಾಗಿ ಜೋಡಿಸಿದರು ಎಂದೂ ಸಂಸ್ಥೆ ಹೇಳಿದೆ. ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಗಗನಯಾತ್ರಿಗಳು ಆರು ತಿಂಗಳ ಕಾಲ ಇಲ್ಲಿ […]

Advertisement

Wordpress Social Share Plugin powered by Ultimatelysocial