ರಾಜ್ಯದ ಪೊಲೀಸ್‌ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿ, ಗಡಿ ದಾಟಿಸಿದ್ದಾರೆ.ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಘಟನೆ ನಡೆದಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು, ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿದ್ದರು.ಅವರಿದ್ದ ವಾಹನಕ್ಕೆ ಅಲ್ಲಿನ ಪೊಲೀಸರು ಭದ್ರತೆ ನೀಡಿದ್ದಾರೆ.ಬೆಂಗಳೂರರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ್ದನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು, ಕರ್ನಾಟಕದ ವಾಹನಗಳ ಮೇಲೆ ದಾಳಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಾಹನಕ್ಕೆ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

ಅಪಾರ್ಟ್ಮೆಂಟ್ ಒಂದರ ಐದನೆ ಮಹಡಿಯಿಂದ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್‍ ಸಿಟಿ ನೀಲಾದ್ರಿ ಇನ್ವೆಸ್ಟ್ ಮೆಂಟ್ ಲೇಔಟ್‍ನಲ್ಲಿ  ನಡೆದಿದೆ…ಇಲ್ಲಿನ ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ,ದಿವ್ಯಾಂಶ್ ರೆಡ್ಡಿ (2) ಬಾಲಕ ಮೃತಪಟ್ಟಿದ್ದಾನೆ.ಬಾಡಿಗೆ ಮನೆ ವಿಚಾರಿಸಲು ಅಜ್ಜಿಯೊಂದಿಗೆ ತೆರೆಳಿದ್ದ ಮಗು ಅಪಾರ್ಟ್‍ಮೆಂಟ್‍ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಆ ವೇಳೆ ಬಾಲ್ಕನಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ದಿವ್ಯಾಂಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಅಪಾರ್ಟ್ ಮೆಂಟ್‌  […]

ಬೆಳಗಾವಿಯಲ್ಲಿ ಕನ್ನಡದ ಭಾವುಟ ಸುಟ್ಟಿರುವ ಹಿನ್ನಲೆ ಯಾದಗಿರಿ ಜಿಲ್ಲೆಯ ಸುಭಾಷ್ ಸರ್ಕಲ್ ಬಳಿ ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ ನಡೆಸಿದ್ದಾರೆ…ನಾಡದ್ರೋಹಿ ಎಂ ಇ ಎಸ್ ಪುಂಡರನ್ನು ಬಂದಿಸುವಂತೆ ಆಗ್ರಹಿಸಿದ್ದಾರೆ…ಜೈ ಶಿವಾಜಿ ಎಂದು ಕೂಗಿ ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರ ಗಲ್ಲು ಶಿಕ್ಷೆಗೆ ಹಾಕಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ…ಎಂ ಇ ಎಸ್ ಪುಂಡರಿಗೆ ದಿಕ್ಕಾರ ದಿಕ್ಕಾರ ಎಂದು ಧರಣಿ ಮಾಡಿದ್ದಾರೆ

ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ 3,263 ರೌಡಿಶೀಟರ್‌ಗಳಲ್ಲಿ 1256 ಮಂದಿಯ ರೌಡಿಶೀಟ್ ಗಳನ್ನು ಮಂಗಳೂರಲ್ಲಿ ಮುಕ್ತಗೊಳಿಸಲಾಯಿತು. ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರೌಡಿ ಶೀಟರ್ ಹಾಳೆಯಿಂದ ಮುಕ್ತ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಉದ್ಯಮಿ ಡಾ.ಎ.ಜೆ.ಶೆಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ […]

ಚಿತ್ರದುರ್ಗ : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ನಾಡಿನ ಬಾವುಟವನ್ನು ದಹನ ಮಾಡಿರುವ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ತೆರಳಿ ಮನವಿ ಸಲ್ಲಿಸಿ, ಅವರನ್ನು ಗಡಿಪಾರು ಮಾಡಿ ಇಲ್ಲವಾದರೆ ಗಲ್ಲಿಗೆರಿಸಿ ಎಂದು ಒತ್ತಾಯಿಸಿದ್ದಾರೆ ಬೆಳಗಾವಿಯಲ್ಲಿ ಸದ್ಯ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಡಿ ಸರ್ಕಾರವೇ ಅಲ್ಲಿರುವಾಗ ಇದರ ಮಧ್ಯೆಯೇ ಎಂಇಎಸ್ ಕಾರ್ಯಕರ್ತರ ಈ ರೀತಿ ವರ್ತನೆ […]

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮತ್ತೆ ಅಕ್ರಮ ಚಿನ್ನ ಪತ್ತೆಯಾಗಿದೆ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಲ್ಲಿ ಬಂದಿಳಿದ ಕಾಸರಗೋಡು ಜಿಲ್ಲೆಯ ತಳಂಗರೆ ಮೂಲದ ಮಹಿಳೆಯ ಬಳಿ 24 ಕ್ಯಾರಟ್ ನ 36 ಲಕ್ಷದ 43 ಸಾವಿರದ 270 ರೂಪಾಯಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಚಿನ್ನದ ಪೇಸ್ಟನ್ನು ಬೂದು ಬಣ್ಣದ ಪೇಪರ್ ನಲ್ಲಿ ಮರೆಮಾಚಿ ಒಳ ಉಡುಪಿನಲ್ಲಿ ಇಟ್ಟು ಹೊಲಿದು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ನಲ್ಲಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಕಟ್ಟುಕಥೆಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದೆ. ಇದು ಬರ್ಬರ ಲಾಠಿಚಾರ್ಜ್ ಪ್ರಮಾದವನ್ನು ಮುಚ್ಚಿ ಹಾಕುವ ಪಿತೂರಿಯಾಗಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ, ಎ.ಕೆ.ಅಶ್ರಫ್ ಹೇಳಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಡಿಸೆಂಬರ್ 14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ […]

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾದಾಮಿಯಲ್ಲಿ ವ್ಯಕ್ತಿಯೊಬ್ಬ ಕೇಸರಿ ಶಾಲು ಹೊದಿಸಲು ಮುಂದಾಗಿದ್ದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು. ಕಾಟರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಆಗಮಿಸಿ ಕೇಸರಿ ಶಾಲನ್ನು ಹೊದಿಸಲು ಪ್ರಯತ್ನಿಸಿದ್ದಾನೆ, ಆಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ವರ್ತನೆ ಅಲ್ಲಿ ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ, ಕೇಸರಿ ಶಾಲು ಹೊದಿಸಲು ಬಂದ ವ್ಯಕ್ತಿ […]

ಬೆಂಗಳೂರು  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್  ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ ಗೃಹ ಸಚಿವ ಆರಗ ಜ್ಞಾನೇಂದ್  ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಸಿಬ್ಬಂದಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬೆಂಗಳೂರು ನಗರದ […]

  ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸ್ಥಳೀಯ ಕೋರ್ಟ್‌ ಆದೇಶಿಸಿದೆ. ಇಲ್ಲಿನ ಪೊಲೀಸ್‌ ಮಾರ್ಗದಲ್ಲಿರುವ ಅಪರಾಧ ವಿಭಾಗದಲ್ಲಿ ಶನಿವಾರ ಹಾಜರಾದ ಅವರನ್ನುಎಸ್‌ಐಟಿ ಅಧಿಕಾರಿಗಳು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ನಂತರ, ತಡರಾತ್ರಿ ಅವರನ್ನು ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್‌ ಗೂ ಹಾಜರುಪಡಿಸುವುದಕ್ಕೂ ಮೊದಲು ವೈದ್ಯರ […]

Advertisement

Wordpress Social Share Plugin powered by Ultimatelysocial