CDS ಚಾಪರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಐಎಎಫ್ ಕಮಾಂಡ್ ಆಸ್ಪತ್ರೆಯಲ್ಲಿ ವಿಧಿವಶರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪಾರ್ಥೀವ ಶರೀರವನ್ನು ಅಂತಿಮ ಗೌರವಗಳಿಗಾಗಿ ಇದೀಗ ಯಲಹಂಕ ಏರ್ ಫೋರ್ಸ್ ಸ್ಟೇಷನ್ ಆವರಣದಲ್ಲಿ ಕರೆತರಲಾಗುತ್ತಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಸರ್ಕಾರದ ಪರವಾಗಿ ವ್ರೀತ್ ಮೂಲಕ ಗೌರವ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ 3,263 ರೌಡಿಶೀಟರ್‌ಗಳಲ್ಲಿ 1256 ಮಂದಿಯ ರೌಡಿಶೀಟ್ ಗಳನ್ನು ಮಂಗಳೂರಲ್ಲಿ ಮುಕ್ತಗೊಳಿಸಲಾಯಿತು. ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರೌಡಿ ಶೀಟರ್ ಹಾಳೆಯಿಂದ ಮುಕ್ತ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಪರಿವರ್ತನಾ ಸಭೆಯಲ್ಲಿ ಉದ್ಯಮಿ ಡಾ.ಎ.ಜೆ.ಶೆಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ […]

ಚಿತ್ರದುರ್ಗ : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ನಾಡಿನ ಬಾವುಟವನ್ನು ದಹನ ಮಾಡಿರುವ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ತೆರಳಿ ಮನವಿ ಸಲ್ಲಿಸಿ, ಅವರನ್ನು ಗಡಿಪಾರು ಮಾಡಿ ಇಲ್ಲವಾದರೆ ಗಲ್ಲಿಗೆರಿಸಿ ಎಂದು ಒತ್ತಾಯಿಸಿದ್ದಾರೆ ಬೆಳಗಾವಿಯಲ್ಲಿ ಸದ್ಯ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಡಿ ಸರ್ಕಾರವೇ ಅಲ್ಲಿರುವಾಗ ಇದರ ಮಧ್ಯೆಯೇ ಎಂಇಎಸ್ ಕಾರ್ಯಕರ್ತರ ಈ ರೀತಿ ವರ್ತನೆ […]

ಲಿಂಗಾಯತ ಪಂಚಮಸಾಲಿ ಮೀಸಲಾತಿ ವಿಳಂಬ ಹಿನ್ನೆಲೆ ಕೂಡಲಸಂಗಮ ಸಂಗಮ ಪೀಠದ ಜಯಮೃತ್ಯುಂಜಯ ಜಗದ್ಗುರು ನೇತೃತ್ವದಲ್ಲಿ ಸ ಸಿಎಂ ಜೊತೆ ಸಭೆ ನಡೆಸಿದ್ದಾರೆ…ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಶಾಸಕರು, ಸಂಸದರ ಜೊತೆ ಸಿಎಂ ಸಭೆಯಲ್ಲಿ ಭಾಗಿಯಾಗಿದ್ರು.ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಕೂಡಲಸಂಗಮ ಸ್ವಾಮೀಜಿ ಸೇರಿ ಪಂಚಮಸಾಲಿ ಮುಖಂಡರ ಜತೆಗೆ ಮಾತು ಕತೆ ನಡೆಸಿದ್ದಾರೆ…ಸಭೆಯಲ್ಲಿ ಲಿಂಗಾಯತ ಪಂಚಮಸಾಲಿ ಹಾಲಿ, ಮಾಜಿ ಶಾಸಕರು, ಸಂಸದರು ಭಾಗಿಯಾಗಿದ್ದರು.ಸಭೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ […]

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮತ್ತೆ ಅಕ್ರಮ ಚಿನ್ನ ಪತ್ತೆಯಾಗಿದೆ. ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಲ್ಲಿ ಬಂದಿಳಿದ ಕಾಸರಗೋಡು ಜಿಲ್ಲೆಯ ತಳಂಗರೆ ಮೂಲದ ಮಹಿಳೆಯ ಬಳಿ 24 ಕ್ಯಾರಟ್ ನ 36 ಲಕ್ಷದ 43 ಸಾವಿರದ 270 ರೂಪಾಯಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಚಿನ್ನದ ಪೇಸ್ಟನ್ನು ಬೂದು ಬಣ್ಣದ ಪೇಪರ್ ನಲ್ಲಿ ಮರೆಮಾಚಿ ಒಳ ಉಡುಪಿನಲ್ಲಿ ಇಟ್ಟು ಹೊಲಿದು ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ನಲ್ಲಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಕಟ್ಟುಕಥೆಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದೆ. ಇದು ಬರ್ಬರ ಲಾಠಿಚಾರ್ಜ್ ಪ್ರಮಾದವನ್ನು ಮುಚ್ಚಿ ಹಾಕುವ ಪಿತೂರಿಯಾಗಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ, ಎ.ಕೆ.ಅಶ್ರಫ್ ಹೇಳಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಡಿಸೆಂಬರ್ 14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ […]

ಶುದ್ಧ ನಂದಿನಿ ತುಪ್ಪ ಯಾರಿಗೆ ತಾನೇ ಇಷ್ಟವಾಗಲ್ಲ. ಆದರೆ ಇಲ್ಲಿ ನಂದಿನಿ ತುಪ್ಪ ಸೇವಿಸುವವರನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ..! ನಂದಿನಿ ತುಪ್ಪವನ್ನೇ ನಕಲಿ ಮಾಡಿ ತಯಾರಿಸುವ ಗೋಡೌನ್ ಒಂದು ಮೈಸೂರಿನ ಹೊಸ ಹುಂಡಿ ಬಳಿ ಪತ್ತೆಯಾಗಿದೆ.ಈ ಗೋಡೌನ್‌ನ ಮೂಲಕ ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದೀಗ ಈ ನಕಲಿ ತುಪ್ಪ ತಯಾರಕರ ವಿತರಣೆ ಜಾಲ ಬಯಲಾಗಿದೆ. ಗುರುವಾರ […]

2ವರ್ಷದ ಗಂಡು ಮಗುವನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ ..2ವರ್ಷದ ಗಂಡು ಮಗುವನ್ನು ನೀರಿನ ತೊಟ್ಟಿಗೆ ಮುಳುಗಿಸಿ ಕೊಲೆ ಮಾಡಿರುವ ಹೆತ್ತ ತಾಯಿ ಮಗುವನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ ಬಳಿಕ ತಾನೂ ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ..ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವರ ಪತ್ನಿ ಅನ್ನಪೂರ್ಣ 22 ವರ್ಷದ ಮೃತ ವಿವಾಹಿತ ಮಹಿಳೆ.ಹಾಗೂ […]

ಒಂದೇ ಕುಟುಂಬದ 3 ಜನರು ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ…ನಿಟ್ಟೂರು ಬಳಿಯ ಸೋಮಲಾಪುರದ ಹೇಮಾವತಿ ನಾಲೆಯಲ್ಲಿ 2 ಶವಗಳು ಪತ್ತೆಯಾಗಿದ್ದು ಹೇಮಾವತಿ ನಾಲಾ ಕಛೇರಿಯ ಇಂಜಿನಿಯರ್ ರಮೇಶ್ (55) ಮತ್ತು ಪತ್ನಿ ಮಮತಾ (46 ) ವರ್ಷ ಶಿಕ್ಷಕಿ ಇವರ ಮಗಳು ಶುಭ (25)ವರ್ಷ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ದೈವಿಗಳು ಮಮತಾ ಮತ್ತು ಶುಭ ಶವಗಳು […]

ಕೊರಟಗೆರೆ: ರಾಂಕಿಗ್ ಡ್ಯಾನ್ಸ್ ಅಕಾಡೆಮಿ,ಹಿಂದೂಸ್ಥಾನಿ ಶಾಸ್ತ್ರೀಯ ಮತ್ತು ಕರ್ನಾಟಕ ನೃತ್ಯ ಶಾಲೆ ಹಾಗೂ ಭರತ ನಾಟ್ಯ ಶಾಲೆ ಇವರ ವತಿಯಿಂದ ಪಟ್ಟಣದ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಅಪ್ಪು ನಮನ ಕಾರ್ಯಕ್ರಮವನ್ನು ಪುನೀತ್ ರಾಜ್ ಕುಮಾರ್ ನೆನಪಿನಾರ್ಥವಾಗಿ ಗೌರವ ಸಮರ್ಪಣೆ ಜೊತೆಗೆ ನೇತ್ರದಾನ ನೋಂದಣಿ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು .ಅಪ್ಪು ನಮನವನ್ನು ನಮ್ಮ ರಾಜ್ಯದಲ್ಲಿ ವಿಶೇಷವಾಗಿ ನಾಡಿನ ಜನತೆ, ಅಭಿಮಾನಿಗಳು ಸಲ್ಲಿಸುತ್ತಿದ್ದಾರೆ, ಅವರು ಸಮಾಜ ಮುಖಿ ಕೆಲಸಗಳನ್ನು ಯಾರಿಗೂ ತಿಳಿಯದೆ […]

Advertisement

Wordpress Social Share Plugin powered by Ultimatelysocial