ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದಲ್ಲಿ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬೀಳಲಿದೆ. ಈಗಾಗಲೇ ಕೋವಿಡ್ ಎರಡು ಬಾರಿಯ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಸೇರಿದಂತೆ ಮತ್ತಿತರ ನಿರ್ಬಂಧಗಳು ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ನೀಡಿದೆ. ಅದರಲ್ಲೂ ಹೋಟೆಲ್ ಉದ್ಯಮ, ಆಟೋ, ಕ್ಯಾಬ್ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು ನಲುಗಿದ್ದಾರೆ. ಇದೇ ಕಾರಣಕ್ಕೆ ನೈಟ್‌ ಕರ್ಪ್ಯೂಗೆ ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಹೋಟೆಲ್ ಉದ್ಯಮಿಗಳು, ಬಾರ್, ಪಬ್‌ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. […]

ಯಶ್​ ಹಾಗೂ ರಾಧಿಕಾ ಪಂಡಿತ್​ ಮನೆಯಲ್ಲಿ ಚಿಕ್ಕದಾಗಿ ಕ್ರಿಸ್​ಮಸ್​ ಟ್ರೀ ಒಂದನ್ನು ಇಡಲಾಗಿದೆ. ಈ ಮರಕ್ಕೆ ಚೆಂದದ ಅಲಂಕಾರ ಮಾಡಲಾಗಿದೆ. ಈ ಫೋಟೋಗೆ ರಾಧಿಕಾ ಚೆಂದದ ಕ್ಯಾಪ್ಶನ್​ ನೀಡಿದ್ದಾರೆ.ಇಡೀ ವಿಶ್ವಾದ್ಯಂತ ಕ್ರಿಸ್​ಮಸ್​ ಆಚರಣೆ ಜೋರಾಗಿ ನಡೆದಿದೆ. ಕೊವಿಡ್​ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವುದರಿಂದ ಕೆಲ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಈ ಹಬ್ಬ ಆಚರಣೆ ಮಾಡಲಾಗಿದೆ. ಕೇವಲ ಕ್ರೈಸ್ತ ಧರ್ಮದವರು ಮಾತ್ರವಲ್ಲದೆ, ಹಿಂದು ಹಾಗೂ ಮುಸ್ಲಿಂ ಸಮುದಾಯದವರೂ ಈ ಹಬ್ಬವನ್ನು ಸರಳವಾಗಿ […]

ಆಂಧ್ರಪ್ರದೇಶದಲ್ಲಿ  2 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು ಒಟ್ಟು 6 ಕ್ಕೆ ತಲುಪಿದೆ  ಕೋವಿಡ್-19 ನ ‌ ಓಮಿಕ್ರಾನ್ ರೂಪಾಂತರದ ಎರಡು ಹೊಸ ಪ್ರಕರಣಗಳೊಂದಿಗೆ ಆಂಧ್ರಪ್ರದೇಶದಲ್ಲಿ ಈಗ ಆರಕ್ಕೆ ತಲುಪಿದೆ ಆಂಧ್ರಪ್ರದೇಶವು covid 19 ನ ಓಮಿಕ್ರಾನ್ ರೂಪಾಂತರದ ಎರಡು ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಇದು ರಾಜ್ಯದಲ್ಲಿ ಆರಕ್ಕೆ ತಲುಪಿದೆ. ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾದಿಂದ ಬಂದ 48 ವರ್ಷದ ಪ್ರಯಾಣಿಕರಿಗೆ ಡಿಸೆಂಬರ್ 20 ರಂದು ಕೋವಿಡ್ […]

ಹೊಸ ವರ್ಷಾಚರಣೆ ಸಂದರ್ಬದಲ್ಲಿ  ಕಠಿಣ ನಿಯಮ ಜಾರಿಗೆ ತರುವ ಕುರಿತಾಗಿ ಮುಂದಿನ ವಾರದಲ್ಲಿ ನಿರ್ದಾರವನ್ನು ತೆಗೆದುಕೊಳ್ಳುವುದಾಗಿ ಮುಖ್ಯ ಮಂತ್ರಿ ಹೇಳಿದ್ದಾರೆ. ಹುಬ್ಬಳ್ಳಿಯ ಎಪಿಎಂಸಿಯಲ್ಲಿ ನಡೆದ  ಒಕ್ಕಲುತನ ಹುಟ್ಟುವಳಿ  ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸುವ ಸಂಬಂಧ ತಜ್ಞರ ಸಮಿತಿ ಜೊತೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗಾರರು ಹೊಸ ವರ್ಷಾಚರಣೆಗೆ ಸಂಬಂದಿಸಿ ಕೇಳಿದ […]

ಕನ್ನಡ ಚಿತ್ರರಂಗದ ಮಟ್ಟಿಗೆ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದು ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ ಚಿತ್ರೀಕರಣ ಭರಣದಿಂದ ಸಾಗಿದ್ದು, ಹೆಚ್ಚು ಅಪ್‌ಡೇಟ್‌ಗಳನ್ನು ಲೀಕ್ ಮಾಡದೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸುತ್ತಿದೆ ಚಿತ್ರತಂಡ. ದರ್ಶನ್ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಗಲಿದೆ ದೊಡ್ಡ ಸುದ್ದಿ ಇದೀಗ ಬಂದಿರುವ ಅಪ್‌ಡೇಟ್‌ನಂತೆ ‘ಕ್ರಾಂತಿ’ ಸಿನಿಮಾದಲ್ಲಿ ಒಬ್ಬರ ಪ್ರಮುಖ ಹಿರಿಯ ನಟ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ವಿ ರವಿಚಂದ್ರನ್. ನಟ ರವಿಚಂದ್ರನ್ ಅವರು ‘ಕ್ರಾಂತಿ’ […]

ರಾಯಚೂರು: ಖಾಸಗಿ ಶಾಲೆಗಳನ್ನು ಮೀರಿಸಿ ಮೊದಲನೇ ಸ್ಥಾನ ಪಡೆಯುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಸರ್ಕಾರಿ ಶಾಲೆ ಯಶಸ್ವಿಯಾಗಿದೆ. ರಾಯಚೂರು ಜಿಲ್ಲೆಯಲ್ಲೇ ನಂಬರ್​ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಅನ್ನು ಜವಳಗೇರಾ ಸರ್ಕಾರಿ ಶಾಲೆ ಹೊಂದಿದ್ದು, ಈಗ ಕಂಪ್ಯೂಟರ್​ ಲ್ಯಾಬ್​ಗೆ ಮೊದಲನೇ ಸ್ಥಾನ ಸಿಕ್ಕಿದೆ. ಸುಮಾರು 1980 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಹೈಟೆಕ್​ ಕಂಪ್ಯೂಟರ್ ಲ್ಯಾಬ್​ಗೆ ಖಾಸಗಿ ಶಾಲಾ ಮಕ್ಕಳು ಮನಸೋತಿದ್ದಾರೆ. ಜವಳಗೇರಾ ಸರ್ಕಾರಿ ಶಾಲೆಯಲ್ಲಿ […]

ಬೆಂಗಳೂರು: ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸದೇ ವಿನಾಕಾರಣ ನಾಯಕತ್ವದ ಬಗ್ಗೆ ಹರಡುವ ಮೂಲಕ ರಾಜ್ಯ ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವ ಸಚಿವರಿಗೆ ಗೇಟ್ ಪಾಸ್ ನೀಡಲು ಬಿಜೆಪಿ ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಲವು ಸಚಿವರು ತಮಗೆ ನೀಡಿದ ಇಲಾಖೆಯ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೇ, ಅನಗತ್ಯವಾಗಿ ವದಂತಿ ಹರಡುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಘನತೆಗೆ ಧಕ್ಕೆ […]

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕುಖ್ಯಾತ ಜೋಕರ್ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳ ಕುರಿತು ಮೊಬೈಲ್ ಭದ್ರತಾ ಪರಿಹಾರ ಸಂಸ್ಥೆ ಪ್ರಡಿಯೊ ಇತ್ತೀಚೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇತ್ತೀಚೆಗೆ, ಸೈಬರ್ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್ಸ್ಕಿಯ ವಿಶ್ಲೇಷಕ, ಟಟಯಾನಾ ಶಿಶ್ಕೋವಾ, ಜೋಕರ್ ಮಾಲ್‌ವೇರ್ ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲುತ್ತಿದೆ ಎಂದು ಕಂಡುಹಿಡಿ ದಿದೆ ಈ ಮಾಲ್‌ವೇರ್ ಅನ್ನು ಮೊದಲು 2017 ರಲ್ಲಿ ಕಂಡುಹಿಡಿಯಲಾಯಿತು ಮತ್ತು ಅದನ್ನು […]

ನವದೆಹಲಿ: PM Kisan 10th Installment Update:- ರೈತರಿಗೆ ಸಂತಸದ ಸುದ್ದಿಯಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರ 10ನೇ ಕಂತಿನ ಹಣಕ್ಕಾಗಿ ಕಾಯುವಿಕೆ ಕೊನೆಗೊಳ್ಳಲಿದೆ. ವಾಸ್ತವವಾಗಿ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ ಕಂತಿನ ಹಣ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಇದರ ಸಂದೇಶವನ್ನು ಫಲಾನುಭವಿಗಳಿಗೂ ರವಾನಿಸಲಾಗಿದೆ. ಈ ನಿಟ್ಟಿನಲ್ಲಿ ಜನವರಿ 1ರಂದು ಪ್ರಧಾನಿ ಮೋದಿ(Narendra Modi) ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ. 10ನೇ ಕಂತಿನ ಹಣ ಯಾವಾಗ ಬರುತ್ತೆ? ರೈತರಿಗೆ […]

Ramya Divya Spandana: ಚೇತನ್ ಕುಮಾರ್​​ ಅಭಿನಯಿಸಿರುವ ‘100 ಕ್ರೋರ್ಸ್​’ ಸಿನಿಮಾದ ಟೀಸರ್​ ಲಾಂಚ್​​ ಆಗುತ್ತಿದೆ. ಇದನ್ನು ‘ಸ್ಯಾಂಡಲ್​ವುಡ್​ ಕ್ವೀನ್​’ ರಮ್ಯಾ ಅವರು ರಿಲೀಸ್​ ಮಾಡಲಿದ್ದಾರೆ ಎಂಬುದು ವಿಶೇಷ.ನಟಿ ರಮ್ಯಾ (Ramya Divya Spandana) ಅವರು ನಟನೆಯಿಂದ ದೂರು ಉಳಿದುಕೊಂಡಿದ್ದರೂ ಕೂಡ ಕನ್ನಡ ಚಿತ್ರರಂಗದ ಅನೇಕರ ಜೊತೆ ಸಂಪರ್ಕ ಹೊಂದಿದ್ದಾರೆ. ಅನೇಕ ಸೆಲೆಬ್ರಿಟಿಗಳ ಜೊತೆ ಅವರ ಒಡನಾಟ ಮುಂದುವರಿದಿದೆ. ಇತ್ತೀಚೆಗೆ ಅವರು ಹಲವು ಸಿನಿಮಾಗಳ ಕುರಿತು ಮಾತನಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾ […]

Advertisement

Wordpress Social Share Plugin powered by Ultimatelysocial