ಸುಲಭವಾಗಿ ಮಾಡಿ ತಿನ್ನಿ ಮೊಟ್ಟೆ ದೋಸೆ!!!!

 

ಬೇಕಾಗುವ ಸಾಮಾಗ್ರಿಗಳು :

  • ಕೋಳಿ ಮೊಟ್ಟೆ- 2
  • ಹಸಿಮೆಣಸಿನ ಕಾಯಿ – 2
  • ಈರುಳ್ಳಿ- 1
  • ಕೊತ್ತಂಬರಿ ಸೊಪ್ಪು- ಸ್ವಲ್ಪ
  • ಕಾಳುಮೆಣಸಿನ ಪುಡಿ – ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಮೊದಲಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಬೇಕು.ನಂತರ ಒಂದು ಬಾಣಲೆಗೆ 2-3 ಚಮಚ ಎಣ್ಣೆಯನ್ನು ಹಾಕಿ, ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಕಾಳು ಮೆಣಸಿನ ಪುಡಿನ್ನು ಸೇರಿಸಿ ತಣ್ಣಗಾಗಲು ಬಿಡಿ.ತಣ್ಣಗಾದ ಬಳಿಕ ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಒಲೆಯ ಮೇಲೆ ತವಾ ಇಟ್ಟು ಒಂದು ಚಮಚ ಎಣ್ಣೆಯನ್ನು ಹಾಕಿ ಮಸಾಲೆ ಮಿಶ್ರಿತ ಮೊಟ್ಟೆಯನ್ನು ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಮೊಟ್ಟೆ ದೋಸೆ ಸವಿಯಲು ಸಿದ್ಧ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವುದು ಹೇಗೆ???

Wed Jan 12 , 2022
    ಬೇಕಾಗುವ ಸಾಮಾಗ್ರಿಗಳು : ನೆಲ್ಲಿಕಾಯಿ- 200 ಗ್ರಾಂ ಜೀರಿಗೆ – ಒಂದೂವರೆ ಚಮಚ ಸೋಂಕು- ಒಂದೂವರೆ ಚಮಚ ಉಪ್ಪು-ರುಚಿಗೆ ತಕ್ಕಷ್ಟು ಅರಿಶಿಣದ ಪುಡಿ – ಅರ್ಧ ಚಮಚ ಸಾಸಿವೆ, ಮೆಂತ್ಯೆ ಪುಡಿ – 1-2 ಚಮಚ ಖಾರದ ಪುಡಿ- 2 ಚಮಚ ಇಂಗು- ಸ್ವಲ್ಪ ಎಣ್ಣೆ- 1 ಬಟ್ಟಲು ಮಾಡುವ ವಿಧಾನ : ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಕಾಟನ್‌ ಬಟ್ಟೆಯಲ್ಲಿ ಒರೆಸಿ. ನಂತರ ಅವುಗಳನ್ನು ನೀರಿನಲ್ಲಿ ಹಾಕಿ […]

Advertisement

Wordpress Social Share Plugin powered by Ultimatelysocial