ನಂದಮೂರಿ ಬಾಲಕೃಷ್ಣ ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ಅವರ ಸಿನಿಮಾಗಳಿಂದ ವಿಮರ್ಶಕರೂ ದೂರವೇ ಉಳಿಯುತ್ತಾರಾದರೂ ಬಾಲಕೃಷ್ಣ ಸಿನಿಮಾಗಳಿಗೆ, ಹಾಗೂ ಅವರಿಗೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗವಿದೆ.ಸಿನಿಮಾ ಹಾಗೂ ರಾಜಕೀಯಕ್ಕಷ್ಟೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಬಾಲಕೃಷ್ಣ ಇತ್ತೀಚೆಗೆ ಕಿರುತೆರೆಗೆ ಕಾಲಿಟ್ಟರು.ಆದರೆ ಅಲ್ಲಿಯೂ ಸೂಪರ್-ಡೂಪರ್ ಹಿಟ್ ಆಗಿಬಿಟ್ಟಿದ್ದಾರೆ. ಇದೇ ಕಾರಣದಿಂದಾಗಿ ಬಾಲಕೃಷ್ಣಗೆ ಸಾಲು-ಸಾಲು ಕಿರುತೆರೆ ಅವಕಾಶಗಳು ಅರಸಿ ಬರುತ್ತಿವೆ.ಆಹಾ ಒಟಿಟಿ ಮೂಲಕ ಬಾಲಕೃಷ್ಣ ಕಿರುತೆರೆಗೆ ಕಾಲಿಟ್ಟು ವರ್ಷವಾಗಿದೆ. ಅವರು ನಡೆಸಿಕೊಡುವ ‘ಅನ್‌ಸ್ಟಾಪೆಬಲ್’ ಭರ್ಜರಿ ಯಶಸ್ಸು […]

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಓಲಾ, ಓಕಿನಾವಾ ಸೇರಿದಂತೆ ಅನೇಕ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಟ್‌ ಕೇಕ್‌ ನಂತೆ ಮಾರಾಟವಾಗುತ್ತಿವೆ. ಇದರ ಜೊತೆಜೊತೆಗೆ ಎಲೆಕ್ಟ್ರಿಕ್‌ ಬೈಕ್‌ಗಳು ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಾ ಇವೆ.ಆದ್ರೆ ಸ್ಪ್ಲೆಂಡರ್ ಮತ್ತು ರಾಯಲ್ ಎನ್‌ಫೀಲ್ಡ್ ಬುಲೆಟ್‌ನಂತಹ ಬೈಕ್‌ಗಳ ಎಲೆಕ್ಟ್ರಿಕ್ ಬೈಕ್‌ಗಳಿಗಾಗಿ ಜನರು ಕಾಯುತ್ತಿದ್ದಾರೆ.ಬಿಹಾರದ ಕಂಪನಿಯೊಂದು ಬುಲೆಟ್‌ನಂಥದ್ದೇ ಎಲೆಕ್ಟ್ರಿಕ್ ಆವೃತ್ತಿಗಳನ್ನು ತಯಾರಿಸಿ ತನ್ನ ವೆಬ್‌ಸೈಟ್‌ನಲ್ಲಿ ಮಾರಾಟ ಮಾಡುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಎಲೆಕ್ಟ್ರಿಕ್ ಬೈಕ್‌ಗಳು ಮತ್ತು […]

ಭಾನುವಾರ ಕಿಡಿಗೇಡಿಗಳು ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖ್ಯಾತ ನಿರ್ಮಾಪಕ ಹಾಗೂ ಎಂ.ಎಲ್.ಸಿ ಸಂದೇಶ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ. ದರ್ಶನ್ ಅದ್ಭುತ ಕಲಾವಿದ. ತಮ್ಮ ಅಭಿನಯದ ಮೂಲಕ ದರ್ಶನ್ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂತಹ ನಟನಿಗೆ ಈ ರೀತಿ ಮಾಡಿದ್ದು ತುಂಬಾ ತಪ್ಪು. ಯಾವ ಕಲಾವಿದನಿಗೂ ಈ ರೀತಿ ಆಗಬಾರದು. ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಸಾಗಬೇಕು. ಈ ರೀತಿಯ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದು […]

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ..ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸುತ್ತಿರುವ “ಬುಲೆಟ್” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಬಂಗಲೆಯೊಂದರಲ್ಲಿ ಹಿರಿಯ ನಟಿ ಭವ್ಯ, ನಟ ಧರ್ಮ ಕೀರ್ತಿರಾಜ್ ಹಾಗೂ ಬೇಬಿ ಸಿದ್ ಟೈನ್ ಅಭಿನಯಿಸುತ್ತಿರುವ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ. ಮೂರು […]

ಈಗಾಗಲೇ ಒಂದು ಹೊಸ ರೀತಿಯ ಸದಭಿರುಚಿಯ ಚಿತ್ರ ಧರಣಿ ಮಂಡಲ ಮಧ್ಯದೊಳಗೆ  ಚಿತ್ರ ತಂಡ ಈಗ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ನೀಡುವ‌ ಮೂಲಕ “K A” ಎಂಬ ಅರ್ಧ ಶೀರ್ಷಿಕೆಯನ್ನು ಅನಾವರಣ ಗೊಳಿಸಿ ಪ್ರಾರಂಭದಲ್ಲೇ  ಕುತೂಹಲವನ್ನು ಕಾಯ್ದಿರಿಸಿದ್ದಾರೆ.ವಿಜಯನಗರದ ಶ್ರೀ ವರಸಿದ್ಧಿ ವಿನಾಯಕ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶೀರ್ಷಿಕೆ ಅನಾವರಣದ ಕಾರ್ಯ ನೆಡೆದಿದೆ.ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ  ಸಂತೋಷ್ ಈಗ ಸ್ವತಂತ್ರ […]

ಮಾವಿನಕೆರೆ ರಂಗನಾಥನ್ ಸಾಹಿತಿಗಳಾಗಿ, ಪ್ರಕಾಶಕರಾಗಿ ಮತ್ತು ಮಾಸ್ತಿ ಪ್ರತಿಷ್ಠಾನದ ಪ್ರಧಾನ ನಿರ್ವಾಹಕರಾಗಿ ಹೀಗೆ ಅನೇಕ ರೀತಿಯಲ್ಲಿ ಗಣ್ಯರೆನಿಸಿದ್ದಾರೆ. ರಂಗನಾಥನ್ 1943ರ ಡಿಸೆಂಬರ್ 21ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ತಂದೆ ಎಚ್.ಆರ್. ಶಿಂಗೈಯ್ಯಂಗಾರ್.‍ ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹಾಸನ, ಚಿಕ್ಕಮಗಳೂರುಗಳಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಪದವಿ ಪಡೆದು, ಸೆಂಟ್ರಲ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಓದಿದರು.‍ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿಗೆ ಓದಿದರಾದರೂ ಎರಡು ಪರೀಕ್ಷೆಗಳಿಗೆ ಹಾಜರಾಗದಂತಹ ಅನಿರೀಕ್ಷಿತ […]

ನಮ್ಮೆಲ್ಲರ ಆತ್ಮೀಯರಾದ ರಂಜನಿ ಪ್ರಭು ಕವಯತ್ರಿಯಾಗಿ, ಪ್ರಾಧ್ಯಾಪಕಿಯಾಗಿ ಮತ್ತು ಹಲವು ಸಾಂಸ್ಕೃತಿಕ ನೆಲೆಗಳ ಪೋಷಕಿಯಾಗಿ ವಿಶಿಷ್ಟರಾದವರು. ಇಂದು ರಂಜನಿ ಪ್ರಭು ಅವರ ಜನ್ಮದಿನ. ರಂಜನಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಅಪ್ಪ-ಅಮ್ಮ ಇಬ್ಬರೂ ಪ್ರಗತಿಪರ ಮನೋಭಾವದವರು. ಅವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಬೆಳೆಸಿದರು. ಕುಟುಂಬದಲ್ಲಿ ಸಾಹಿತ್ಯದ ವಾತಾವರಣ ಇತ್ತು. ದೊಡ್ಡಪ್ಪ, ಕಾವ್ಯಾಲಯ ಪ್ರಕಾಶನ ನಡೆಸುತ್ತಿದ್ದರು. ಅಪ್ಪ ಅಮ್ಮ ಕೂಡ ಓದಿನ ಗೀಳಿದ್ದವರು. […]

ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಅನುಭಾವಕ್ಕೆ ಬಂದ ರೀತಿಯನ್ನು ಗುರುತಿಸುವುದಾದರೆ, ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಶನಿವಾರದಂದು ತಪ್ಪದೆ ಕೇಳಿಬರುತ್ತಿದ್ದ “ಕೌಸಲ್ಯಾ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿಧ್ವನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮುದ್ದುಮಾಡುತ್ತಿತ್ತೋ, ಇಲ್ಲ ಇಂತಹ ಸುಂದರ ಇನಿಧ್ವನಿ ಕೇಳದೆ ವ್ಯರ್ಥವಾಗಿ ನಿದ್ದೆಯಲ್ಲಿ ಸಮಯ ವ್ಯಯಮಾಡುತ್ತಿದ್ದೇವೆಲ್ಲ ಎಂಬ ಭಾವ ಹುಟ್ಟಿಸುತ್ತಿತ್ತೋ; ಹೀಗೆಯೇ ಎಂದು […]

ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ. ಹೆಳವನಕಟ್ಟೆ ಗಿರಿಯಮ್ಮನವರು ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. ಇವರ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ. ತಂದೆ ಬಿಷ್ಟಪ್ಪ ಜೋಯಿಸರು. ಈ ದಂಪತಿಗಳಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ ಗಿರಿಯಮ್ಮ ಎಂದು ಹೆಸರನ್ನಿಟ್ಟರು. ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾಕಾರ್ಯದಲ್ಲಿ ಆಸಕ್ತಳಾಗಿದ್ದಳು. ಈಕೆಗೆ 4 […]

ಜಯಲಕ್ಷ್ಮೀ ಶ್ರೀನಿವಾಸನ್ ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಮಧ್ಯೆ ಸೇತುವೆಯಾಗಿ ಎರಡೂ ಭಾಷಿಗರಿಗೆ ಅಪಾರ ಸಾಹಿತ್ಯ ಮತ್ತು ಸಾಹಿತ್ಯ ವಿನಿಮಯವನ್ನು ತಂದವರು. ಜಯಲಕ್ಷ್ಮಿಯವರು ಕರೂರು ಜಿಲ್ಲೆಯ ವಾರಂಗಲ್ಲಲ್ಲಿ 1911ರ ಡಿಸೆಂಬರ್ 12ರಂದು ಜನಿಸಿದರು. ತಂದೆ ರಾಜಮಂತ್ರ ಪ್ರವೀಣ ಎ.ವಿ. ರಾಮನಾಥನ್ ಮೈಸೂರು ಸಂಸ್ಥಾನದ ಮೆಂಬರ್ ಆಫ್ ಕೌನ್ಸಿಲ್ ಆಗಿದ್ದವರು. ತಾಯಿ ಸೀತಾಲಕ್ಷ್ಮೀ. ಇವರ ಮನೆಮಾತು ತಮಿಳಾದ್ದರಿಂದ ಮನೆಯಲ್ಲಿ ತರಿಸುತ್ತಿದ್ದ ತಮಿಳು ಪತ್ರಿಕೆಗಳಿಂದ ತಮಿಳು ಹಾಗೂ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ […]

Advertisement

Wordpress Social Share Plugin powered by Ultimatelysocial