ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಪ್ರಥಮ ಕನ್ನಡಿಗರೆಂಬ ಕೀರ್ತಿಗೆ ಪಾತ್ರರಾದವರು ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯನವರು.ವೆಂಕಟರಾಮಯ್ಯನವರು 1924ರ ಡಿಸೆಂಬರ್ 18ರಂದು ಜನಿಸಿದರು. ಇವರ ತಂದೆ ಇ. ವಿ. ಸೀತಾರಾಮಯ್ಯನವರು ಶಾಲಾ ಶಿಕ್ಷಕರಾಗಿದ್ದರು. ತಾಯಿ ನಂಜಮ್ಮನವರು.ವೆಂಕಟರಾಮಯ್ಯನವರು ಪಾಂಡವಪುರದಲ್ಲಿ ಸರ್ಕಾರಿ ಪ್ರೈಮೆರಿ ಶಾಲೆ ಮತ್ತು ಪ್ರೌಢ ಶಾಲೆ, ಮೈಸೂರಿನಲ್ಲಿ ಡಿ. ಬನುಮಯ್ಯ ಹೈಸ್ಕೂಲು ಮುಂತಾದ ಕಡೆ ಓದಿ, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಉನ್ನತ ಶ್ರೇಣಿಯೊಂದಿಗೆ ಪದವಿ ಪಡೆದರು. ಪುಣೆಯ ಕಾನೂನು ಕಾಲೇಜು ಮತ್ತು […]

  ಇಂದು ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಖ್ಯಾತರಾಗಿದ್ದ ಅಡ್ಯನಡ್ಕ ಕೃಷ್ಣಭಟ್ಟರ ಸಂಸ್ಮರಣಾ ದಿನ. ಲೇಖಕರಾಗಿ, ವಿಜ್ಞಾನ ಪತ್ರಿಕಾ ಸಂಪಾದಕರಾಗಿ ಮತ್ತು ಭೌತವಿಜ್ಞಾನದ ಶ್ರೇಷ್ಠ ಅಧ್ಯಾಪಕರಾಗಿ ಅಪಾರ ಕಾರ್ಯಮಾಡಿದ್ದ ಕೃಷ್ಣಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಕಾಸರಗೋಡಿಗೆ ಹೋಗುವ ಹಾದಿಯಲ್ಲಿರುವ ಪ್ರಾಕೃತಿಕ ಸೌಂದರ್ಯದ ನಿಧಿಯಂತಿರುವ ಅಡ್ಯನಡ್ಕ ಎಂಬಲ್ಲಿ 1938ರ ಮಾರ್ಚ್ 15ರಂದು ಜನಿಸಿದರು. ತಂದೆ ತಿಮ್ಮಣ್ಣ ಭಟ್ಟರು ಮತ್ತು ತಾಯಿ ಲಕ್ಷ್ಮಿ ಅಮ್ಮ ಅವರು. ಅಡ್ಯನಡ್ಕದ ಶಾಲೆಯಲ್ಲಿ ಕೃಷ್ಣಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ […]

ಟಿ. ಎಸ್. ಸತ್ಯನ್ ಅಂತರರಾಷ್ಟ್ರೀಯ ಮಟ್ಟದ ಶ್ರೇಷ್ಠ ಛಾಯಾಗ್ರಾಹಕರಾಗಿ ಸುಪ್ರಸಿದ್ಧರು.ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ 1923ರ ಡಿಸೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರಿನ ಬನುಮಯ್ಯ ಪ್ರೌಢಶಾಲೆ ಹಾಗೂ ಮಹಾರಾಜ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 1944ರಲ್ಲಿ ಬಿ.ಎ. ಪದವಿ ಗಳಿಸಿದರು.ಛಾಯಾಚಿತ್ರಕಲೆಯಲ್ಲಿ ಆಸಕ್ತಿ ತಾಳಿದ ಸತ್ಯನ್ ಅತ್ಯಂತ ಯಶಸ್ವೀ ಛಾಯಾಗ್ರಾಹಕ-ಪತ್ರಕರ್ತರಾದರು. ಸತ್ಯನ್ ಜಗತ್ತಿನಾದ್ಯಂತ ಹಲವಾರು ವರ್ತಮಾನ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಛಾಯಾ ಚಿತ್ರಗಳನ್ನು ಮತ್ತು ಲೇಖನಗಳನ್ನು ನೀಡಿದರು. ಸಮಕಾಲೀನ ಭಾರತದ ಚಿತ್ರವನ್ನು ಸಾಗರಾಂತರ […]

    ಆಕಾಶವಾಣಿ ಈರಣ್ಣ’ನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿದ್ದ ಮಹಾನ್ ಕ್ರಿಯಾಶೀಲ ಕಲಾವಿದರಾಗಿದ್ದವರು ಎ. ಎಸ್. ಮೂರ್ತಿ. ಇಂದು ಈ ಅಪ್ರತಿಮ ಪ್ರತಿಭಾ ಚೇತನದ ಸಂಸ್ಮರಣೆ ದಿನ. ಎ.ಎಸ್. ಮೂರ್ತಿಯವರು 1929ರ ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು. ತಾಯಿ ಗೌರಮ್ಮ. ಮೂರ್ತಿಯವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನೆರವೇರಿತು. ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ‘ಕ್ಯಾಲಿಕೊ ಮಿಲ್ಸ್’ನಲ್ಲಿ ಕೆಲಕಾಲ […]

ಬೆಂಗಳೂರಿನ ಲಾಲ್ಬಾಗನ್ನು ನೋಡಿದ್ರೆ ಇದನ್ನು ನಮಗೆ ಈ ಊರಿನ ಮಧ್ಯೆ ಕೊಟ್ಟ ಪುಣ್ಯಾತ್ಮನಿಗೆ ಕೈಮುಗಿಯಬೇಕು ಅನಿಸುತ್ತೆ. ಕಾಲದಿಂದ ಕಾಲಕ್ಕೆ ಇದನ್ನು ಅಭಿವೃದ್ಧಿ ಪಡಿಸಿ, ಇಂದೂ ಅದು ನಮಗೆ ಉಳಿಯವಂತೆ ಮಾಡಿಕೊಟ್ಟಿರುವ ಮಹನೀಯರು ಅನೇಕರಿದ್ದಾರೆ. ಅವರಲ್ಲಿ ಗುಸ್ಟಾವ್ ಹರ್ಮನ್ ಕೃಂಬಿಗಲ್ ಪ್ರಮುಖರು. ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಕ, ಸಸ್ಯ ಸಂರಕ್ಷಕ ಹೀಗೆ ಬಹುಮುಖಿಗಳಾದ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅಪಾರ. ಗುಸ್ಟಾವ್ […]

ಆತ್ಮೀಯರಾದ ಅನಸೂಯ ಜಹಗೀರದಾರ ಅವರು ಸಂಗೀತ ಮತ್ತು ಸಾಹಿತ್ಯಲೋಕದಲ್ಲಿ ಕ್ರಿಯಾಶೀಲರಾಗಿದ್ದಾರೆ.ಅನಸೂಯ ಜಹಗೀರದಾರ ಅವರ ಜನ್ಮದಿನ ಡಿಸೆಂಬರ್ 19. ಕೊಪ್ಪಳದವರಾದ ಅನಸೂಯ ಜಹಗೀರದಾರ ಎಂ.ಎ., ಬಿ. ಇಡಿ ಪದವಿ ಪಡೆದು ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲ್ಲೂಕಿನ ಬೇವೂರು ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತರಾದ ಅನಸೂಯ ಜಹಗೀರದಾರ ಹಿಂದೂಸ್ಥಾನಿ ಸಂಗೀತದಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣತೆ ಸಾಧಿಸಿದ್ದಾರೆ. ಅವರು ಅನೇಕ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ […]

  ನಟ ಧರ್ಮ ಕೀರ್ತಿರಾಜ್ ಹಾಗೂ ಸೋನುಗೌಡ ಮುಖ್ಯಭೂಮಿಕೆಯಲ್ಲಿರುವ ‘ವಸುಂಧರದೇವಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಟಿ ಸೋನು ಗೌಡ ಅವರಿಗೆ ಮುಖ್ಯಮಂತ್ರಿ ಪಾತ್ರವಿದೆ. ಹಾಗೆಯೇ ಪೊಲೀಸ್ ಅಧಿಕಾರಿಯಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಹಿನ್ನೆಲೆಯಲ್ಲಿ ಮಾಧ್ಯಮ ಜೊತೆ ಖುಷಿ ಹಂಚಿಕೊಂಡಿದೆ ಚಿತ್ರತಂಡ. ಈ ವೇಳೆ ಧರ್ಮ ಕೀರ್ತಿರಾಜ್ ಅವರ ಪೋಷಕರು ಕೂಡ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ‘ನನ್ನ ಚಿತ್ರಕ್ಕೆ ಶುಭ ಹಾರೈಸಲು‌ ನನ್ನ […]

  ಸಲ್ಮಾನ್ ಖಾನ್ ನಟನೆಯ ‘ಜಬ್ ಪ್ಯಾರ್ ಕೈಸೆ ಹೋತಾ ಹೈ’ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ನಮ್ರತಾ ಶಿರೋಡ್ಕರ್ ಅವರು, 1999ರಲ್ಲಿ ತೆರೆಕಂಡ ‘ವಾಸ್ತವ್’ ಚಿತ್ರದ ಮೂಲಕ ನಾಯಕಿಯಾಗಿ ಬೆಳೆದರು. ಆಮೇಲೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿ ಜನಪ್ರಿಯತೆ ಪಡೆದರು. ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡಿದ್ದ ನಮ್ರತಾಗೆ ದೊಡ್ಡ ಮಟ್ಟದ ಬೇಡಿಕೆಯಿತ್ತು. ಹೀಗಿರುವಾಗಲೇ ಅವರು ಮಹೇಶ್ ಬಾಬು ಜೊತೆ ಮದುವೆಯಾಗಿ ನಟನೆಯಿಂದ ದೂರ ಸರಿದರು.ನಟನೆಯಿಂದ ದೂರಾದ ನಮ್ರತಾ […]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಇನ್ನೂ ಹಾಟ್ ಟಾಪಿಕ್ ಆಗಿಯೇ ಇದೆ. ಈ ಮಧ್ಯೆ ದರ್ಶನ್ ತನ್ನ ಬೆಂಬಲಕ್ಕೆ ನಿಂತಿರೋ ಎಲ್ಲಾ ತಾರೆಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಿಚ್ಚಸುದೀಪ್‌ಗೂ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.ನಿನ್ನೆ (ಡಿಸೆಂಬರ್ 21) ಯಿಂದ ಇದೇ ವಿಚಾರವಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗೇ ಬಿಟ್ರು ಅನ್ನೋ ಲೆವೆಲ್‌ಗೆ ಇಬ್ಬರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. […]

ಆರು ವರ್ಷದಿಂದ ಪ್ರೀತಿಸಿದ್ದ ಜೋಡಿಯೊಂದು ಒಂದೇ ವೇಲ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇಬ್ಬರ ಪ್ರೀತಿಯ ವಿಷಯ ತಿಳಿದಿದ್ದ ಎರಡೂ ಕುಟುಂಬಗಳು ಮದುವೆಗೆ  ಗ್ರೀನ್ ಸಿಗ್ನಲ್ ನೀಡಿದ್ದರು. ಕುಟುಂಬಸ್ಥರಿಂದ ಒಪ್ಪಿಗೆ ಸಿಕ್ಕ ನಂತರ ಜೋಡಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಆದ್ರೆ ಇವರಿಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿಸಿದ್ದು ಒಂದು ಪ್ರಕರಣ. ಒಂದು ತಿಂಗಳ ಹಿಂದೆ ಯುವಕನ ವಿರುದ್ಧ ದಾಖಲಾದ ಒಂದು ಪ್ರಕರಣ ಇಂದು ಇಬ್ಬರ […]

Advertisement

Wordpress Social Share Plugin powered by Ultimatelysocial